ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪೂನಂ ಡಿಲ್ಲೋನ್ ಮನೆಯಲ್ಲಿ ಕೆಲಸಕ್ಕೆ ಬಂದ ವ್ಯಕ್ತಿಯೊಬ್ಬ ದುಬಾರಿ ಡೈಮಂಡ್ ನೆಕ್ಲೇಸ್ ಕಳುವು ಮಾಡಿದ್ದಾನೆ.
ಮನೆಯಲ್ಲಿ ಕೆಲಸದವನೇ ಡೈಮಂಡ್ ನೆಕ್ಲೇಸ್ ಜೊತೆಗೆ 35,000 ರೂ. ನಗದು ಹಣ ಹಾಗೂ ಕೆಲವು ಡಾಲರ್‌ಗಳನ್ನೂ ಕದ್ದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು 37 ವರ್ಷದ ಸಮೀರ್ ಅನ್ಸಾರಿ ಎಂದು ಗುರುತಿಸಲಾಗಿದೆ, ಈತ ಫ್ಲಾಟ್‌ಗೆ ಪೇಯಿಂಟಿಂಗ್ ಕೆಲಸಕ್ಕೆ ಒಂದು ಟೀಂ ಜೊತೆಗೆ ಬಂದಿದ್ದ. ಕಳೆದ ಡಿಸೆಂಬರ್ 28ರಿಂದ ಇದೇ ಜನವರಿ 5ರ ವರೆಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಹೊಂಚು ಹಾಕಿದ್ದ ಆರೋಪಿ ಮನೆಯ ಕಬೋರ್ಡ್‌ವೊಂದರಲ್ಲಿಟ್ಟಿದ್ದ ನೆಕ್ಲೇಸ್, ನಗದು, ಡಾಲರ್‌ಗಳನ್ನು ಕದ್ದೊಯ್ದಿದ್ದಾನೆ ಎನ್ನಲಾಗಿದೆ.
ಸದ್ಯ ನಟಿ ಮುಂಬೈನ ಜುಹುನಲ್ಲಿ ವಾಸಿಸುತ್ತಿದ್ದಾರೆ. ಆದ್ರೆ ತನ್ನ ಫ್ಲಾಟ್‌ನಲ್ಲಿ ಕೆಲಸ ನಡೆಯುತ್ತಿದ್ದ ಕಾರಣ, ತನ್ನ ಮಗ ಅನ್ಮೋಲ್ ವಾಸಿಸುವ ʻಖಾರ್ʼ ನಿವಾಸದಲ್ಲಿ ಉಳಿದುಕೊಂಡಿದ್ದರು. ಇದೇ ಮನೆಯಲ್ಲಿ ಕೆಲಸದವರಿಗೂ ಉಳಿಯಲು ಅವಕಾಶ ಮಾಡಿಕೊಡಲಾಗಿತ್ತು. ಇದರ ಲಾಭ ಪಡೆದ ಖತರ್ನಾಕ್ ಹಣ, ಒಡವೆ ದೋಚಿದ್ದಾನೆ. ಆರೋಪಿ ಅನ್ಸಾರಿ ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ಪಾರ್ಟಿಗೆ ಖರ್ಚು ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.