ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಜಾತು ಶಿಶುವನ್ನು ಬೀದಿನಾಯಿ ಕಚ್ಚಿಕೊಂಡು ಹೋದ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಹೆರಿಗೆ ನಂತರ ತಾಯಿ ಮಗುವನ್ನು ವಾರ್ಡ್‌ನ ಹಿಂಬದಿಯಲ್ಲಿ ಬಿಟ್ಟು ಹೋಗಿದ್ದಾರೆ. ಮಗುವನ್ನು ನಾಯಿ ಕಚ್ಚಿಕೊಂಡು ಆಸ್ಪತ್ರೆ ಒಳಗೆ ಓಡಾಡಿದೆ. ಇದನ್ನು ಗಮನಸಿದ ಜನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿ ನಾಯಿಯನ್ನು ಗದರಿ ಓಡಿಸಿದ್ದು, ಮಗು ಇದ್ದ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ತದನಂತರ ಚೀಲದಲ್ಲಿ ಇರುವುದು ಮಗು ಎಂದು ತಿಳಿದಿದೆ. ತಕ್ಷಣವೇ ತಪಾಸಣೆ ಮಾಡಿದ್ದು, ಹೆಣ್ಣುಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮಗುವಿನ ತಾಯಿ ಕಂದಮ್ಮನನ್ನು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಬಿಟ್ಟು ಹೋಗಿದ್ದಾಳೆ. ಮಗುವನ್ನು ನಾಯಿ ಎಳೆದಾಡಿಟ್ಟು ಮೈತುಂಬಾ ಗಾಯಗಳಾಗಿದ್ದವು. ಕೆಲ ಕಾಲ ಹೆರಿಗೆ ವಾರ್ಡ್‌ನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಗುವಿನ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಗುವಿನ ತಂದೆ ತಾಯಿ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಮೆಗ್ಗಾನ್‌ನ ಹೆರಿಗೆ ವಾರ್ಡ್‌ನ ವೈದ್ಯರು ಹಾಗೂ ಸಿಬ್ಬಂದಿ ವಿಚಾರಣೆ ಆರಂಭವಾಗಿದೆ.