ಡಿವಿಡೆಂಡ್‌ ಮೂಲಕ ಲಾಭಗಳಿಸಬೇಕಾ?: ಒಂದೇ ವರ್ಷದಲ್ಲಿ ಅತಿ ಹೆಚ್ಚು ಆದಾಯ ನೀಡಿದ ಷೇರುಗಳ ಲಿಸ್ಟ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ತಮ್ಮ ಷೇರುದಾರರಿಗೆ ಡಿವಿಡೆಂಟ್‌ ಅನ್ನು ಕೊಡುಗೆಯಾಗಿ ನೀಡುತ್ತವೆ. ಅನೇಕ ಷೇರುದಾರರು ಷೇರು ಬೆಲೆಯಲ್ಲಿನ ಲಾಭಗಳ ಹೊರತಾಗಿ ಡಿವಿಡೆಂಡ್‌ ಮೂಲಕವೇ ಹೆಚ್ಚು ಲಾಭಗಳಿಸುತ್ತಾರೆ. ನೀವೂ ಕೂಡ ಡಿವಿಡೆಂಡ್‌ ಮೂಲಕ ಲಾಭ ಗಳಿಸಲು ಯೋಚಿಸಿದರೆ ಒಂದೇ ವರ್ಷದಲ್ಲಿ ಅತಿ ಹೆಚ್ಚು ಡಿವಿಡೆಂಡ್‌ ನೀಡಿದ ಷೇರುಗಳ ಲಿಸ್ಟ್‌ ಇಲ್ಲಿದೆ.

ವೇದಾಂತ:
ಅನಿಲ್‌ ಅಗರ್ವಾಲ್‌ ನಾಯಕತ್ವದ ಮೈನಿಂಗ್‌ ದೈತ್ಯ ವೇದಾಂತ ಕಂಪನಿಯು 2022 ನೇ ಆರ್ಥಿಕ ವರ್ಷದಲ್ಲಿ ಐದುಬಾರಿ ಇಂಟ್ರಿಮ್‌ ಡಿವಿಡೆಂಡ್‌ ಅನ್ನು ಷೇರುದಾರರಿಗೆ ನೀಡಿದೆ. ಒಟ್ಟಾರೆಯಾಗಿ ಒಂದು ಷೇರಿನ ಮೇಲೆ 101.5 ರೂ.ಗಳನ್ನು ಅಂದರೆ 36 ಶೇಕಡಾ ಲಾಭವನ್ನು ಷೇರುದಾರರು ಗಳಿಸಿದ್ದಾರೆ.

India's leading natural resources conglomerate | Vedanta Group Company

ಹಿಂದುಸ್ತಾನ್‌ ಝಿಂಕ್:‌
ವೇದಾಂತ ಕಂಪನಿಯ ಅಂಗ ಸಂಸ್ಥೆಯಾದ ಹಿಂದುಸ್ತಾನ್‌ ಝಿಂಕ್‌ ಕೂಡ ಕಳೆದ ಆರ್ಥಿಕ ವರ್ಷದಲ್ಲಿ 5 ಬಾರಿ ಡಿವಿಡೆಂಡ್‌ ನೀಡಿದ್ದು ಒಟ್ಟಾರೆಯಾಗಿ 75.5 ರೂ ಮೊತ್ತವನ್ನು ಅಂದರೆ 25 ಶೇಕಡಾದಷ್ಟನ್ನು ಷೇರುದಾರರು ಪಡೆದಿದ್ದಾರೆ.

Hindustan Zinc stake sale, Hindustan Zinc share price nse, HZL share price, Hindustan  Zinc news, Hindustan Zinc dividend | Business News – India TV

ಐಡಿಎಫ್‌ಸಿ:
ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಯಾದ ಐಡಿಎಫ್‌ಸಿ ಕಳೆದ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಡಿವಿಡೆಂಡ್‌ ನೀಡಿದ್ದು ಒಟ್ಟಾರೆಯಾಗಿ 12 ರೂ. ಅಂದರೆ 15 ಶೇಕಡಾದಷ್ಟು ಲಾಭಾಂಶವನ್ನು ಷೇರುದಾರರಿಗೆ ನೀಡಿದೆ.

IDFC can now exit IDFC First Bank - Banking Frontiers

ಸನೋಫಿ ಇಂಡಿಯಾ:
ಫ್ರೆಂಚ್‌ ಮೂಲದ ಒಡೆತನ ಹೊಂದಿರುವ ಔಷಧ ಕಂಪನಿ ಸನೋಫಿ ಇಂಡಿಯಾವು ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ 683 ರೂ.ಗಳಷ್ಟು ಡಿವಿಡೆಂಡ್‌ ಪಾವತಿ ಮಾಡಿದೆ. ಒಟ್ಟಾರೆಯಾಗಿ 12 ಶೇಕಡಾದಷ್ಟು ಲಾಭಾಂಶವನ್ನು ಷೇರುದಾರರು ಪಡೆದಿದ್ದಾರೆ.

Sanofi India Ltd in Park Street,Kolkata - Best in Kolkata - Justdial

 

ಒಎನ್‌ಜಿಸಿ:
ಸರ್ಕಾರಿ ಸ್ವಾಮ್ಯದ ತೈಲೋದ್ಯಮ ಕಂಪನಿ ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ ಕಾರ್ಪೋರೇಷನ್‌ ಕಳೆದ ವರ್ಷ ಮೂರು ಬಾರಿ ಡಿವಿಡೆಂಡ್‌ ನೀಡಿದ್ದು ಒಟ್ಟಾರೆಯಾಗಿ 14 ರೂ. ಅಂದರೆ 9 ಶೇಕಡಾ ಲಾಭಾಂಶವನ್ನು ಷೇರುದಾರರಿಗೆ ನೀಡಿದೆ.

ONGC has reported highest ever profit of 40,306 crore rupees - Tfipost.com

ಆಯ್ಲ್‌ ಇಂಡಿಯಾ ಲಿಮಿಟೆಡ್:‌
ಇನ್ನೊಂದು ಸರ್ಕಾರಿ ಸ್ವಾಮ್ಯದ ಕಚ್ಚಾತೈಲ ಮತ್ತು ಅನಿಲೋತ್ಪಾದನಾ ಕಂಪನಿಯಾದ ಆಯ್ಲ್‌ ಇಂಡಿಯಾ ಲಿಮಿಟೆಡ್‌ ಕಳೆದ ಆರ್ಥಿಕ ವರ್ಷದಲ್ಲಿ 19.5 ರೂ. ಡಿವಿಡೆಂಡ್‌ ವಿತರಿಸಿದ್ದು ಒಟ್ಟಾರೆಯಾಗಿ 7 ಶೇಕಡಾ ಲಾಭಾಂಶವನ್ನು ನೀಡಿದೆ.

Oil India Limited Recruitment 2022: Apply for 62 posts at oil-india.com –  Check eligibility, selection process

ಗ್ಲಾಕ್ಸೋಸ್ಮಿತ್ಕ್ಲೈನ್ ಫಾರ್ಮಾಸ್ಯುಟಿಕಲ್ಸ್:‌
ಪಟ್ಟಿಯಲ್ಲಿರುವ ಎರಡನೇ ಔಷಧ ತಯಾರಿಕಾ ಕಂಪನಿ ಗ್ಲಾಕ್ಸೋಸ್ಮಿತ್ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಒಟ್ಟಾರೆಯಾಗಿ 90 ರೂ. ಡಿವಿಡೆಂಡ್‌ ನೀಡಿದ್ದು 7 ಶೇಕಡಾ ಲಾಭಾಂಶ ನೀಡಿದೆ.

Glaxosmithkline Pharmaceuticals Limited-Maharashtra - Company CSR Profile

ನಿಪ್ಪೋನ್‌ ಲೈಫ್‌ ಇಂಡಿಯಾ:
ಪೋರ್ಟ್‌ಫೋಲಿಯೋ ಮತ್ತು ಮ್ಯೂಚುವಲ್‌ಫಂಡ್ಸ್‌ ನಿರ್ವಾಹಕ ಕಂಪನಿ ಕಳೆದ ವರ್ಷದಲ್ಲಿ 11.5 ರೂ ಡಿವಿಡೆಂಡ್‌ ನೀಡಿದ್ದು ಒಟ್ಟಾರೆಯಾಗಿ 6 ಶೇಕಡಾ ಲಾಭಾಂಶ ನೀಡಿದೆ.

Nippon Life India Asset Management Ltd. Dividend (2021)

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!