ವರ್ಷಗಳ ಕನಸು ನನಸು, ಇಂದು ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅತೀ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನ್ನು ಇಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

60 ವರ್ಷದ ಹಿಂದೆ ಆರಂಭವಾಗಿದ್ದ ಈ ಕನಸು, ಇಂದು ನನಸಾಗುವ ಸಂದರ್ಭ ಬಂದಿದೆ. ಮುಂಬೈನ ಸೆವ್ರಿ ಹಾಗೂ ರಾಯಗಢದ ನ್ಹವಾ ಪ್ರದೇಶದ ನಡುವಿನ 21.8 ಕಿ.ಮೀ ಉದ್ದದ ಸೇತುವೆಯನ್ನು ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

Atal Setu to be inaugurated on January 12: A journey to India's longest sea  bridgeಒಟ್ಟಾರೆ ಆರು ಲೇನ್ ಮಾರ್ಗ ಹೊಂದಿರುವ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು ಸಮುದ್ರದ ಮೇಲೆ 16.50 ಕಿಮೀ ಹಾಗೂ ಭೂಮಿಯ ಮೇಲೆ 5.50 ಕಿ.ಮೀ ಉದ್ದವನ್ನು ಹೊಂದಿದೆ.

Mumbai Trans Harbour Link PHOTOS: Witness the Beauty of India's Longest Sea  Bridge- Republic Worldಈ ರಸ್ತೆಯಲ್ಲಿ ನಾಲ್ಕು ಚಕ್ರ ವಾಹನಗಳ ವೇಗಮಿತಿ 100 ಕಿಮೀ ಆಗಿದೆ, ಇನ್ನು ಬೈಕ್, ಆಟೋ ಹಾಗೂ ಟ್ರಾಕ್ಟರ್ ಸಂಚಾರ ನಿರ್ಬಂಧಿಸಲಾಗಿದೆ. 1962ರಲ್ಲಿ ಎರಡು ನಗರಗಳ ಮಧ್ಯೆ ಸಂಚಾರದ ಕನಸು ಆರಂಭವಾಗಿತ್ತು. ಅಂತಿಮವಾಗಿ 2018 ರಲ್ಲಿ ಕಾಮಗಾರಿ ಆರಂಭವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!