ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಒಂದೇ ಕುಟುಂಬದ ಐವರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಆದರ್ಶ ನಗರಲ್ಲಿ ಘಟನೆ ನಡೆದಿದ್ದು, ಕುಟುಂಬ ಸಾಲದಲ್ಲಿ ಸಿಲುಕಿತ್ತು ಎನ್ನಲಾಗಿದೆ. ಸಾಲ ಕೇಳಲು ಜನ ಮನೆ ಮುಂದೆ ಬಂದು ಮುಜುಗರ ಅನುಭವಿಸಿದ್ದರು. ಒಬ್ಬರೇ ಆತ್ಮಹತ್ಯೆ ಮಾಡಿಕೊಂಡರೆ ಉಳಿದವರಿಗೆ ತೊಂದರೆ ನೀಡುತ್ತಾರೆ ಎಂದು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ.
ಕೇದಾರನಾಥ ಗುಪ್ತಾ ತನ್ನ ಕುಟುಂಬಕ್ಕೆ ವಿಶ ನೀಡಿದ್ದಾರೆ. ಒಬ್ಬ ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೋ ಒಬ್ಬ ವ್ಯಕ್ತಿಯಿಂದ ಸಾಲಕ್ಕೆ ಒತ್ತಡ ಬರುತ್ತಿತ್ತು. ಹಾಗಾಗಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ.