ಹೊಸದಿಗಂತ ವರದಿ ಹಾವೇರಿ :
ಸಮರ್ಪಕವಾಗಿ ಟಿಸಿ ಅಳವಡಿಸುವಂತೆ ಆಗ್ರಹಿಸಿ ಅಗಡಿ ಗ್ರಾಮದ ರೈತನೊರ್ವ ನಗರದ ಹೆಸ್ಕಾಂ ಕಚೇರಿಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಗಡಿ ಗ್ರಾಮದ ಶಿವಾನಂದ ಬ್ಯಾಡಗಿ ಎಂಬ ರೈತ ಕಳೆದ ಎರಡು ವರ್ಷಗಳ ಹಿಂದೆ ತಮ್ಮ ನೀರಾವರಿ ಜಮೀನಿಗೆ ಟಿಸಿ ಸಂಪರ್ಕ ಕಲ್ಪಿಸುವಂತೆ ಇಪ್ಪತೈದು ಸಾವಿರಹಣ ಕಟ್ಟಿದ್ದರು. ಆದರೆ ಹೆಸ್ಕಾಂ ಅಧಿಕಾರಿಗಳು ಎರಡು ವರ್ಷಗಳಿಂದ ರೈತರಿಗೆ ಕುಂಟು ನೆಪ ಹೇಳುತ್ತ ಕಾಲ ಹರಣ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಬೇಸತ್ತ ರೈತ ಬುಧವಾರ ಕುಟುಂಬ ಸಮೇತ ಎತ್ತು ಚಕ್ಕಡಿಗಳೊಂದಿಗೆ ನಗರದ ಕೆಪಿಟಿಸಿಎಲ್ ಕಚೇರಿಗೆ ಬಂದು ಹೆಸ್ಕಾಂ ಕಚೇರಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬೆನ್ನಲ್ಲೇ ಹೆಸ್ಕಾಂ ಎಇಇ ಅಗಡಿ ಗ್ರಾಮಕ್ಕೆ ತರಳಿ ಸ್ಥಳ ಪರಿಶೀಲನೆ ನಡೆಸಿ, ಎರಡು ದಿನದಲ್ಲಿ ಟಿಸಿ ಅಳವಡಿಸಿಕೊಡುವ ಭರವಸೆ ನೀಡಿದರು. ಈ ಭರವಸೆ ಮೇರೆಗೆ ರೈತ ಮತ್ತು ಆತನ ಕುಟುಂಬ ಪ್ರತಿಭಟನೆ ಕೈ ಬಿಟ್ಟು ಗ್ರಾಮಕ್ಕೆ ಹಿಂದಿರುಗಿದರು.