ಬರ ಅಧ್ಯಯನ ತಂಡದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರದಿಂದ ಬರ ಅಧ್ಯಯನದ ತಂಡ ರಾಜ್ಯಕ್ಕೆ ಆಗಮಿಸಿದ್ದು, ಬರ ಪೀಡಿತ ಗ್ರಾಮಗಳಿಗೆ ತೆರಳಿ ವಸ್ತುಸ್ಥಿತಿ ಪರಿಶೀಲಿಸುತ್ತಿದ್ದಾರೆ.

ಇಂದು ಬೆಳಗಾವಿಗೆ ತಂಡ ಆಗಮಿಸಿದ್ದು, ರೈತನೊಬ್ಬ ವಿಷದ ಬಾಟಲಿ ಹಿಡಿದು ಅಧಿಕಾರಿಗಳ ಮುಂದೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಲವತ್ತು ಎಕರೆ ಬೆಳೆ ಸಂಪೂರ್ಣ ಹಾನಿಯಾಗಿದೆ, ಆತ್ಮಹತ್ಯೆ ಬಿಟ್ಟು ಬೇರೇನೂ ದಾರಿ ಇಲ್ಲ ಎಂದು ಹೇಳುತ್ತಲೇ ರೈತ ವಿಷ ಕುಡಿಯಲು ಮುಂದಾಗಿದ್ದು, ಪೊಲೀಸರು ವಿಷದ ಬಾಟಲಿಯನ್ನು ಕಸಿದುಕೊಂಡಿದ್ದಾರೆ.

ಅಧಿಕಾರಿಗಳು ಬರೋದು ಹೋಗೋದು ಹೊಸತೇನಿಲ್ಲ, ಆದರೆ ನಮಗೆ ಯಾವ ಪರಿಹಾರವೂ ಸಿಲ್ಲಿಲ್ಲ, ಹೆಣ್ಣುಮಕ್ಕಳಿಗೆ ಸಾಕಷ್ಟು ಗ್ಯಾರೆಂಟಿ ಕೊಟ್ಟಿದೆ, ಆದರೆ ರೈತರಿಗೆ ಏನೂ ಇಲ್ಲ ಎಂದು ರೈತ ಕಣ್ಣೀರಿಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!