ಮಗಳ ಮಾತೃ ಹೃದಯ: ನಿಷ್ಕಲ್ಮಶ ಪ್ರೀತಿಗೆ ಕಣ್ಣೀರು ಹಾಕಿದ ತಂದೆ, ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳು ತಮ್ಮ ಅದ್ಭುತ ಪ್ರೀತಿಯಿಂದ ನೋವುಗಳನ್ನು ಮರೆಯುವಂತೆ ಮಾಡುತ್ತಾರೆ. ಈ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅನೇಕರು ಕಠಿಣ ಸಮಯವನ್ನು ಎದುರಿಸಿದ್ದಾರೆ. ನಾವು ನೋಡುತ್ತಿರುವ ವೀಡಿಯೋದಲ್ಲಿ ಪುಟ್ಟ ಬಾಲಕಿ ತನ್ನ ತಂದೆ ರೆಸ್ಟೋರೆಂಟ್‌ನಲ್ಲಿ ತಲೆ ತಗ್ಗಿಸಿ ನೋವಿನಿಂದ ಕೂತಿರುವಾಗ ಪುಟ್ಟ ಬಾಲಕಿ ತನ್ನ ಸ್ವೆಟರ್‌ ಅನ್ನು ತಂದೆಗೆ ಹೊದಿಸಿರುವ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ.

ಪೀಪಲ್ ಮ್ಯಾಗಜೀನ್ ಪ್ರಕಾರ.. (ವೀಡಿಯೊದ ಸ್ಥಳವನ್ನು ನಿರ್ದಿಷ್ಟಪಡಿಸಲಾಗಿಲ್ಲ) ವಾಂಗ್ ರೆಸ್ಟೋರೆಂಟ್ ಮಾಲೀಕರು ಸಾಂಕ್ರಾಮಿಕ ರೋಗದ ಆರ್ಥಿಕ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ವಾಂಗ್ ತನ್ನ ರೆಸ್ಟೋರೆಂಟ್‌ನಲ್ಲಿ ಕೆಲಸ ಮುಗಿಸಿದ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ಕೈಗಳನ್ನು ಮೇಜಿನ ಮೇಲೆ ನಿದ್ದೆ ಮಾಡಿದ್ದಾರೆ. ಆತನ ಪುಟ್ಟ ಮಗಳು ಅಪ್ಪ ಮಲಗಿದ್ದನ್ನು ನೋಡಿ ಮೆಲ್ಲನೆ ಅಪ್ಪನ ಬಳಿ ಬಂದು ತನ್ನ ಸ್ವೆಟರ್ ನಿಂದ ಹೊದಿಸಿ ಅಲ್ಲಿಂದ ಹೊರಟಳು. ಸ್ವಲ್ಪ ಸಮಯದ ನಂತರ ತನ್ನ ಬೆನ್ನ ಮೇಲಿನ ಸ್ವರ್ಟರ್ ಕಂಡು  ಮಗಳು ತೋರಿದ ಪ್ರೀತಿಗೆ ಕಣ್ಣೀರು ಹಾಕಿದರು.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುದ್ದು ಬಾಲಕಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!