ವಿಶ್ವವಿಖ್ಯಾತ ಹಂಪಿಯಲ್ಲಿ ಬಣ್ಣಗಳದ್ದೇ ದರ್ಬಾರ್‌, ಹೋಳಿಯಲ್ಲಿ ಮಿಂದೆದ್ದ ವಿದೇಶಿಗರು

ಹೊಸದಿಗಂತ ವರದಿ ವಿಜಯನಗರ:

ವಿಶ್ವವಿಖ್ಯಾತ ಹಂಪಿಯಲ್ಲಿ ಕಾಮ ದಹನ ನಿಮಿತ್ತ ಶನಿವಾರ ಹೋಳಿ ಹಬ್ಬದ ಸಂಭ್ರಮ ಕಳೆ ಗಟ್ಟಿತ್ತು. ಸ್ಥಳೀಯರು ಸೇರಿದಂತೆ ದೇಶ- ವಿದೇಶದಿಂದ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಬಣ್ಣ ಬಣ್ಣದ ಹೋಕಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಹೋಳಿ ಹುಣ್ಣಿಮೆ ನಿಮಿತ್ತ ತಾಲೂಕಿನ ಐತಿಹಾಸಿಕ ಹಂಪಿಯ ರಥ ಬೀದಿಯಲ್ಲಿ ಶುಕ್ರವಾರ ತಡ ರಾತ್ರಿ ಕಾಮ ದಹನ ನೆರವೇರಿಸಲಾಯಿತು. ಶನಿವಾರ ಬೆಳಗ್ಗೆ ಸ್ಥಳೀಯರೊಂದಿಗೆ ವಿದೇಶಿಗರು ಹೋಲಿ ಆಚರಿಸಿದರು. ಹಿರಿ- ಕಿರಿಯರು ಎಂಬ ಭೇದವಿಲ್ಲದೇ, ಪ್ರೀತಿ, ಸ್ನೇಹ ಹಾಗೂ ಗೌರವದೊಂದಿಗೆ ಪರಸ್ಪರ ಬಣ್ಣ ಎರಚಿಕೊಂಡು, ಹ್ಯಾಪಿ ಹೋಲಿ ಎಂಬ ಹರ್ಷೋದ್ಘಾರ ಮೊಳಗಿಸಿದರು.


ಜನತಾ ಪ್ಲಾಟ್‌ನಿಂದ ಆರಂಭವಾದ ಬಣ್ಣದೋಕುಳಿಯ ಮೆರವಣಿಗೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತಲುಪಿ, ಪುನಃ ಜನತಾ ಪ್ಲಾಟ್‌ನ ವಿವಿಧ ಓಣಿಗಳಲ್ಲಿ ಸಂಚರಿಸಿ, ತುಂಗಭದ್ರಾ ನದಿಗೆ ತಲುಪಿ ಮುಕ್ತಾಯಗೊಂಡಿತು.

ಮೆರವಣೆಗೆಯಲ್ಲಿ ಡ್ರಮ್ಸ್, ಹಲಗೆ ಸದ್ದಿಗೆ ವಿದೇಶಿಗರು ಕುಣಿದು ಕುಪ್ಪಳಿಸಿದರು. ನೆದರ್‌ಲ್ಯಾಂಡ್, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್ , ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು, ಬಣ್ಣದ ಓಕಳಿಯಲ್ಲಿ ಮಿಂದೆದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here