ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ – 1ಕಪ್
ಜೀರಿಗೆ – 2 ಚಮಚ
ಎಳ್ಳು – 2 ಚಮಚ
ಹುರಿಗಡಲೆ – ಅರ್ಧ ಕಪ್
ಅಕ್ಕಿಹಿಟ್ಟು – 3 ಕಪ್
ಅರಶಿಣ ಹುಡಿ- ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 2 ಚಮಚ
ಎಣ್ಣೆ – ಕರಿಯಲು ಬೇಕಾಗುವಷ್ಟು
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಗೆ ಉದ್ದಿನಬೇಳೆ ಹಾಕಿಕೊಂಡು ಕಂದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಜೀರಿಗೆ, ಹುರಿಗಡಲೆ ಹಾಗೂ ಎಳ್ಳು ಹಾಕಿಕೊಂಡು ಹುರಿದುಕೊಳ್ಳಿ.
ಬಳಿಕ ಹುರಿದಿಟ್ಟುಕೊಂಡ ಉದ್ದಿನ ಬೇಳೆ ಹಾಗೂ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಜರಡಿ ಹಿಡಿಯಬೇಕು.
ನಂತರ ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ಅರಶಿಣ, ಹುರಿದ ಎಳ್ಳು, ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಅದಕ್ಕೆ ಉದ್ದಿನ ಬೇಳೆ ಪುಡಿಯನ್ನೂ ಹಾಕಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ಬಿಸಿನೀರು ಸೇರಿಸಿಕೊಳ್ಳುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಮೃದುವಾಗಿರಲಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಗೆ ಇಡಿ. ಎಣ್ಣೆ ಕಾದ ಬಳಿಕ ಚಕ್ಕುಲಿ ಒರಳಿಗೆ ಹಿಟ್ಟನ್ನು ಹಾಕಿಕೊಂಡು ಎಣ್ಣೆಯೊಳಗೆ ಬಿಡಿ. ಬಳಿಕ ಎರಡೂ ಬದಿ ಕೆಂಪಗಾಗುವವರೆಗೆ ಕಾಯಿಸಿ.
ಈಗ ಗರಿಗರಿಯಾದ ಉದ್ದಿನಬೇಳೆ ಚಕ್ಕುಲಿ ರೆಡಿ.