ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಹೌದು, ನಂಬಲಸಾಧ್ಯವಾದರೂ ಇದು ಸತ್ಯ. ಏಳು ತಿಂಗಳ ಮಗುವಿನ ಹೊಟ್ಟೆಯಿಂದ ಎರಡು ಕೆಜಿ ತೂಕದ ಭ್ರೂಣವನ್ನು ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ, ಹೆದರುವ ಅಗತ್ಯ ಇಲ್ಲ. ತಾಯಿಯ ಭ್ರೂಣದಲ್ಲಿದ್ದ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಬೆಳೆದಿರುವುದು ಅಪರೂಪವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರತಾಪಗಢದ ಕುಂದಾ ನಗರ ನಿವಾಸಿ ಸಂದೀಪ್ ಶುಕ್ಲಾ ಅವರ ಮಗು ಇದಾಗಿದೆ, ಮಗುವಿಗೆ ಹುಟ್ಟಿದಾಗಿನಿಂದಲೂ ಅನಾರೋಗ್ಯ ಎನಿಸಿದೆ, ಮಗುವಿನ ಹೊಟ್ಟೆ ಊದಿಕೊಂಡೇ ಇದೆ, ಇದರಿಂದ ಗಾಬರಿಯಾದ ಪೋಷಕರು ವೈದ್ಯರ ಬಳಿ ತೆರಳಿದ್ದಾರೆ.
ಮಗುವಿಗೆ ನಾನಾ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಏಳು ತಿಂಗಳ ನಂತರ ಮಗುವಿಗೆ ಉಸಿರಾಟಕ್ಕೂ ಸಮಸ್ಯೆಯಾಗಿದೆ ನಂತರ ಮಗು ಊಟ, ನೀರು ನಿಲ್ಲಿಸಿದೆ. ಮಗುವಿನ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ವೈದ್ಯರು ಊಹಿಸಿದ್ದಾರೆ. ಆದರೆ ಇದು ಗಡ್ಡೆಯಾಗಿರಲಿಲ್ಲ ಭ್ರೂಣ ಎಂದು ವೈದ್ಯರು ಹೇಳಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.