ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಚಲಿಸುತ್ತಿದ್ದ ಕಾರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿದ್ದು, ರಸ್ತೆಯಲ್ಲೇ ಕಾರು ಹೊತ್ತಿ ಉರಿದಿದೆ.
ಬೆಳಗಾವಿಯ ಖಾನಾಪುರ ತಾಲೂಕಿನ ಅಸೋಗಾದಿಂದ ಸ್ವಗ್ರಾಮಕ್ಕೆ ಕಾರ್‌ನಲ್ಲಿ ಕುಟುಂಬ ವಾಪಾಸ್ ಆಗುತ್ತಿದ್ದ ವೇಳೆ ಕಾರ್‌ನಲ್ಲಿ ಹೊಗೆ ಕಾಣಿಸಿದೆ.
ತಕ್ಷಣ ಕಾರು ನಿಲ್ಲಿಸಿ, ಚಾಲಕ ಕಾರ್‌ನಲ್ಲಿದ್ದವರನ್ನು ಹೊರಕ್ಕೆ ಇಳಿಸಿದ್ದಾರೆ. ತಕ್ಷಣವೇ ಬೆಂಕಿ ಹೊತ್ತಿದ್ದು, ಏಕಾಏಕಿ ಕಾರು ಧಗಧಗನೆ ಉರಿದಿದೆ. ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.