ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಫಿಟ್ನೆಸ್ ಸೆಂಟರ್‌ನ ಕೋಚ್‌ನ್ನು ಬಂಧಿಸಲಾಗಿದೆ. ಫಿಟ್ನೆಸ್ ಸೆಂಟರ್‌ನಲ್ಲಿ ಸ್ವಿಮ್ಮಿಂಗ್ ನಂತರ ಮಹಿಳೆ ಸ್ನಾನ ಮಾಡುತ್ತಿದ್ದರು. ವಿಡಿಯೋ ಮಾಡಿದ ಕೋಚ್ ವಿರುದ್ಧ ಮಹಿಳೆ ದೂರು ನೀಡಿದ್ದರು.
ಬಾಣಸವಾಡಿಯ ಎನ್‌ಆರ್‌ಐ ಲೇಔಟ್‌ನ ಜಿಮ್‌ನಲ್ಲಿ ಪ್ರಕರಣ ನಡೆದಿದ್ದು, ಮಹಿಳೆ ಬಾತ್‌ರೂಂ ಕಿಟಕಿಯ ಬಳಿ ಮೊಬೈಲ್ ಇಟ್ಟಿದ್ದನ್ನು ನೋಡಿದ್ದಾರೆ. ನಂತರ ಹೊರಬಂದು ನೋಡುವಾಗ ಕೋಚ್ ಪರಾರಿಯಾಗಿದ್ದಾರೆ.
ಮಹಿಳೆ ಮ್ಯಾನೇಜರ್‌ಗೆ ಈ ಬಗ್ಗೆ ದೂರು ನೀಡಿದ್ದು, ಸಿಸಿಟಿವಿ ಪರಿಶೀಲನೆ ಮಾಡಿಸಿದ್ದಾರೆ. ಈ ವೇಳೆ ಕೋಚ್ ವಿಡಿಯೋ ಮಾಡಲು ಮೊಬೈಲ್ ಇಟ್ಟಿದ್ದು ಕಾಣಿಸಿದೆ.
ಕೇರಳ ಮೂಲದ ಫಿಟ್ನೆಸ್ ಕೋಚ್ ಸಿಬಿಯಾಚನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೆ ಮಹಿಳೆ ಫಿಟ್ನೆಸ್ ಸೆಂಟರ್ ಸೇರಿದ್ದರು. ಮಹಿಳೆಗೆ ಅನುಮಾನ ಬಂದಿದೆ ಎಂದಾಕ್ಷಣ ಕೋಚ್ ತನ್ನ ಫೋನ್‌ನಿಂದ ಫೋಟೊ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
ಇದೀಗ ಪೊಲೀಸರು ಫೋನ್ ಪಡೆದು ಡೇಟಾ ಹಿಂಪಡೆಯಲು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.