ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನೋ ಮಾತನ್ನು ಕೇಳಿರ್ತೀರಿ ಆದರೆ ಇಲ್ಲಿ ಗಂಡ ಹೆಂಡತಿ ನಡುವಿನ ಕಿರಿಕ್‌ನಿಂದಾಗಿ ಐದು ವರ್ಷದ ಕಂದಮ್ಮನ ಪ್ರಾಣವೇ ಹೋಗಿದೆ.
ಚಿಕ್ಕಮಗಳೂರಿನ ಅಜ್ಜಂಪುರದ ಶಿವನಿ ಗ್ರಾಮದಲ್ಲಿ ಘಟನೆ ನಡೆದಿದೆ. ತಂದೆ ಮಂಜುನಾಥ್ ಹಾಗೂ ಹೆಂಡತಿ ಮಧ್ಯೆ ಆಗಾಗ ಜಗಳಗಳು ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಪ್ರತಿ ಬಾರಿ ಮಂಜುನಾಥ್ ಕುಡಿದು ಬಂದು ಹೆಂಡತಿಗೆ ಹೊಡೆಯುತ್ತಿದ್ದ. ಆಕೆಗೆ ಅನೈತಿಕ ಸಂಬಂಧ ಇದೆ ಎಂದು ಮಂಜುನಾಥ್ ನಂಬಿದ್ದ.
ಸೆ.19ರಂದು ಮಂಜುನಾಥ್ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ತಾಯಿಗೆ ಹೊಡೆಯುವುದನ್ನು ಸಹಿಸದ ಐದು ವರ್ಷದ ಮಗಳು ಅಡ್ಡ ಬಂದು ಪ್ರಶ್ನಿಸಿದ್ದಾಳೆ. ತಾಯಿಗೆ ಹೊಡೆಯದಂತೆ ಹೇಳಿದ್ದಾರೆ. ಇದರಿಂದ ಕೋಪದಲ್ಲಿ ಮಂಜುನಾಥ್ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಆ ವೇಳೆ ಮಗಳು ಮೃತಪಟ್ಟಿದ್ದಾಳೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.