ಶಿರಡಿ ಸಾಯಿಬಾಬಾಗೆ ವಜ್ರದ ಕಿರೀಟ ಅರ್ಪಿಸಿದ ವಿದೇಶಿ ಭಕ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಕ್ತಿಗೆ ದೇಶ, ಭಾಷೆ, ಬಣ್ಣದ ಬೇಧವೇ ಇಲ್ಲ, ಇದಕ್ಕೆ ನಿದರ್ಶನದಂತೆ ವಿದೇಶಿ ಭಕ್ತರೊಬ್ಬರು ಶಿರಡಿ ಸಾಯಿಬಾಬಾಗೆ ವಜ್ರದ ಕಿರೀಟ ಅರ್ಪಿಸಿದ್ದಾರೆ. ಮಹಾರಾಷ್ಟ್ರದ ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟವನ್ನು ಇಂಗ್ಲೆಂಡ್ ಮೂಲದ ಕನಾರಿ ಸುಬಾರಿ ಪಟೇಲ್ ಸಮರ್ಪಿಸಿದ್ದಾರೆ.

ಒಟ್ಟಾರೆ ೩೬೮ ಗ್ರಾಂ ತೂಕ ಇರುವ ಕಿರೀಟದ ವಿನ್ಯಾಸವೂ ಆಕರ್ಷಕವಾಗಿದೆ. ಸಾಯಿಬಾಬಾ ಟ್ರಸ್ಟ್‌ಗೆ ಕಿರೀಟವನ್ನು ಹಸ್ತಾಂತರಿಸಲಾಗಿದ್ದು, ಇದರ ಬೆಲೆ ಬರೋಬ್ಬರಿ ೨೮ ಲಕ್ಷ ರೂಪಾಯಿ ಎನ್ನಲಾಗಿದೆ. ಪ್ರತಿ ಆರತಿಯ ಸಮಯದಲ್ಲಿ ಸಾಯಿಬಾಬಾಗೆ ಕಿರೀಟ ಅರ್ಪಿಸುವುದು ವಾಡಿಕೆಯಾಗಿದ್ದು, ಈ ಹಿಂದೆ ಬೆಳ್ಳಿಯ ಕಿರೀಟವನ್ನು ಅರ್ಪಿಸಲಾಗಿತ್ತು. ಇದೀಗ ವಜ್ರದ ಕಿರೀಟವನ್ನು ಸಾಯಿಬಾಬಾ ಮೂರ್ತಿಗೆ ತೊಡಿಸಲಾಗುವುದು ಎಂದು ಟ್ರಸ್ಟಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!