ಆಂಧ್ರಪ್ರದೇಶದ ರಾಜಮಂಡ್ರಿ ಯಾರ್ಡ್ ಬಳಿ ಹಳಿ ತಪ್ಪಿದ ಸರಕು ಸಾಗಣೆ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನವೆಂಬರ್ 9 ರ ಬುಧವಾರ ಬೆಳಿಗ್ಗೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ನಿಲ್ದಾಣದ ಬಳಿ ಎನ್‌ಎಸ್‌ಜಿ ಗೂಡ್ಸ್ ರೈಲಿನ ಬೋಗಿ ಹಳಿತಪ್ಪಿದೆ. ರಾಜಮಂಡ್ರಿಯ ರೈಲ್ವೆ ಯಾರ್ಡ್‌ನಲ್ಲಿ ವ್ಯಾಗನ್ ಹಳಿತಪ್ಪಿದ್ದು ನವೆಂಬರ್ 9 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ.

ಇದರಿಂದಾಗಿ 9 ರೈಲುಗಳನ್ನು ರದ್ದುಗೊಳಿಸಬೇಕಾಯಿತು ಹಾಗೂ ಇನ್ನೆರಡು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಯಿತು ಮತ್ತು ಇನ್ನೊಂದು ರೈಲಿನ ವೇಳಾಪಟ್ಟಿಯನ್ನು ಬದಲಾಯಿಸಬೇಕಾಯಿತು. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದು ಬಂದಿಲ್ಲ.

ದಕ್ಷಿಣ ಮಧ್ಯ ರೈಲ್ವೆ, ಸಿಪಿಆರ್‌ಒ ರಾಕೇಶ್ ಅವು ಈ ಕುರಿತು ಹೇಳಿಕೆ ನೀಡಿದ್ದು “ಎನ್‌ಎಸ್‌ಜಿ ಗೂಡ್ಸ್ ರೈಲಿನಿಂದ ಬಂದ ವ್ಯಾಗನ್ ಹಳಿತಪ್ಪಿತು. ಇದು ಚೆನ್ನೈನಿಂದ ಕೋಲ್ಕತ್ತಾಗೆ ಚಲಿಸುತ್ತಿತ್ತು, ಇಂದು ಮುಂಜಾನೆ 3 ಗಂಟೆಗೆ ರಾಜಮಂಡ್ರಿ ಯಾರ್ಡ್ ಬಳಿ ಹಿಂಭಾಗದಿಂದ 16 ನೇ ವ್ಯಾಗನ್ ಹಳಿತಪ್ಪಿತು. ಘಟನೆಯಿಂದಾಗಿ, ನಾವು ದ್ವಿಪಥ ಕಾರ್ಯಾಚರಣೆಯನ್ನು ನಿಲ್ಲಿಸಿದ್ದೇವೆ ಹಾಗೂ ಒಂದು ಸಾಲನ್ನು ವಿಲೀನಗೊಳಿಸಿದ್ದೇವೆ. ಎಲ್ಲಾ ಮುಂಭಾಗ ಮತ್ತು ಹಿಂಭಾಗದ ಬಂಡಿಗಳನ್ನು ತೆರವುಗೊಳಿಸಲಾಗಿದೆ. ಹಳಿ ತಪ್ಪಲು ಕಾರಣವೇನೆಂದು ತಿಳಿಯಬೇಕಿದೆ. ಹೆಚ್ಚಿನ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!