ಬಂಗಾಳ ಸಚಿವನ ಆಪ್ತೆಯ ಇನ್ನೊಂದು ಮನೆಯಲ್ಲಿ ಸಿಕ್ಕಿತು ದುಡ್ಡಿನ ರಾಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ಮನೆಯಿಂದ ಜಾರಿ ನಿರ್ದೇಶನಾಲಯ ಭಾರಿ ಪ್ರಮಾಣದ ಹಣ ವಶಪಡಿಸಿಕೊಂಡಿದೆ.
ತನಿಖೆಗೆ ಸಂಬಂಧಿಸಿದಂತೆ ಇಡಿ ಅರ್ಪಿತಾ ಮುಖರ್ಜಿ ನಿವಾಸಕ್ಕೆ ನೋಟು ಎಣಿಕೆ ಯಂತ್ರಗಳನ್ನು ತಂದ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ವಶಪಡಿಸಿಕೊಂಡು ಸುಮಾರು 20 ಕೋಟಿ ರೂ. ಎಣಿಸಲಾಗಿತ್ತು. ಆ ಬಳಿಕ ಕಳೆದ ಶನಿವಾರ ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಟರ್ಜಿ ಅವರನ್ನು ಬಂಧಿಸಿತ್ತು.
ಇದಾದ ಬಳಿಕ ಹೆಚ್ಚಿನ ಆಸ್ತಿ ದಾಖಲೆಗಳನ್ನು ಕೂಡ ಸಂಸ್ಥೆ ವಶಪಡಿಸಿಕೊಂಡಿದೆ. ಇಂದು ಬಂಧಿತ ಅರ್ಪಿತಾಗೆ ಸೇರಿದ ಮತ್ತೊಂದು ಫ್ಲ್ಯಾಟ್ ನಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಕಂಡು ಬಂದ ಭಾರೀ ಪ್ರಮಾಣದ ನಗದು ಜಪ್ತಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!