ಕೋರ್ಟ್ ಆವರಣದಲ್ಲೇ ಗ್ಯಾಂಗ್‍ಸ್ಟರ್ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಕೈಸರ್‌ಬಾಗ್ ಸ್ಥಳೀಯ ನ್ಯಾಯಾಲಯದ ಆವರಣದಲ್ಲೇ ಗ್ಯಾಂಗ್‍ಸ್ಟರ್ (Gangster) ಮುಕ್ತರ್ ಸಹಚರನನ್ನು ಕೋರ್ಟ್ (Court) ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ವಕೀಲರ (Lawyer) ವೇಷದಲ್ಲಿ ಬಂದ ಹಂತಕರು ಏಕಾಏಕಿ ಗ್ಯಾಂಗ್‍ಸ್ಟರ್ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನೆಲಕ್ಕೆ ಕುಸಿದ ಆತನ ರಕ್ತಸ್ರಾವವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಪಟ್ಟಿದ್ದಾರೆ. ಆದರೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಕಾಲಿಗೆ ಗುಂಡು ತಗುಲಿದೆ.

ಮೃತ ಸಂಜೀವ್ ಜೀವಾ ಪಶ್ಚಿಮ ಯುಪಿಯಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಅಲ್ಲದೇ ಉತ್ತರಾಖಂಡ (Uttarakhand) ಹಾಗೂ ಉತ್ತರ ಪ್ರದೇಶದಲ್ಲಿ (Uttar Pradesh) ಆತನ ವಿರುದ್ಧ ಕನಿಷ್ಠ 50 ಕ್ರಿಮಿನಲ್ ಪ್ರಕರಣಗಳಿವೆ. ಆತ ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!