July 23, 2026
Thursday, July 23, 2026
spot_img

ಭಾರತಕ್ಕೆ ಜಾಗತಿಕ ಜಯ: ‘ಆಪರೇಷನ್ ಹಾರ್ಡ್ ಬಾಲ್’ ಮೂಲಕ ಬಯಲಾಯ್ತು ನಿಜ್ಜರ್ ಹತ್ಯೆಯ ಅಸಲಿ ಮುಖ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕಾರಾಗೃಹದಿಂದಲೇ ಅಂತಾರಾಷ್ಟ್ರೀಯ ಕ್ರಿಮಿನಲ್ ಸಾಮ್ರಾಜ್ಯ ಮುನ್ನಡೆಸುತ್ತಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಭಾರಿ ಆಘಾತ ನೀಡಿವೆ. FBI ನೇತೃತ್ವದ ‘ಆಪರೇಷನ್ ಹಾರ್ಡ್ ಬಾಲ್’ ಜಂಟಿ ಕಾರ್ಯಾಚರಣೆಯಲ್ಲಿ ಈ ಕುಖ್ಯಾತ ಸಿಂಡಿಕೇಟ್‌ನ 24 ಶೂಟರ್‌ಗಳನ್ನು ಬೇಟೆಯಾಡಲಾಗಿದೆ.

ಭಾರತದ ಮೇಲಿದ್ದ ಸುಳ್ಳು ಆರೋಪಕ್ಕೆ ತೆರೆ

2023ರಲ್ಲಿ ಕೆನಡಾದಲ್ಲಿ ಖಲಿಸ್ತಾನಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದಾಗ, ಪ್ರಧಾನಿ ಜಸ್ಟಿನ್ ಟ್ರುಡೊ ಇದರ ಹಿಂದೆ ಭಾರತೀಯ ಏಜೆಂಟರಿದ್ದಾರೆ ಎಂದು ರಾಜಕೀಯ ಪ್ರೇರಿತ ಆರೋಪ ಮಾಡಿದ್ದರು. ನವದೆಹಲಿ ಈ ವಾದವನ್ನು ತೀವ್ರವಾಗಿ ನಿರಾಕರಿಸಿ, ಸಾಕ್ಷಿ ನೀಡುವಂತೆ ಸವಾಲು ಹಾಕಿತ್ತು.

ಎಫ್‌ಬಿಐ ತನಿಖೆಯಲ್ಲಿ ಭಾರತ ಮುಕ್ತ, ಬಿಷ್ಣೋಯ್ ಸಿಕ್ಕಿಬಿದ್ದ!

ಪ್ರಸ್ತುತ ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್ ಭಾರತಕ್ಕೆ ಸಂಪೂರ್ಣ ಕ್ಲೀನ್ ಚೀಟ್ ನೀಡಿದೆ. ತನಿಖಾ ವರದಿಯಲ್ಲಿ ಎಲ್ಲೂ ಭಾರತ ಸರ್ಕಾರದ ಉಲ್ಲೇಖವಿಲ್ಲ. ಬದಲಿಗೆ, ನಿಜ್ಜರ್ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಕೈವಾಡವಿರುವುದು ಸಾಬೀತಾಗಿದೆ.

ಏನಿದು ರಹಸ್ಯ ಕಾರ್ಯಾಚರಣೆ?

ಅಮೆರಿಕದ ನ್ಯಾಯಾಂಗ ಇಲಾಖೆ (DoJ) ಪ್ರಕಾರ, ಈ ಭಾರತ ಮೂಲದ ಗ್ಯಾಂಗ್ ವಿದೇಶಿ ಉದ್ಯಮಿಗಳನ್ನು ಗುರಿಯಾಗಿಸಿ ಸುಲಿಗೆ, ಹತ್ಯೆ ಮತ್ತು ಡ್ರಗ್ಸ್ ದಂಧೆ ನಡೆಸುತ್ತಿತ್ತು. ಸದ್ಯ ಬಿಷ್ಣೋಯ್ ಸೇರಿದಂತೆ 37 ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ದೋಷಾರೋಪಣೆ ಪಟ್ಟಿಗಳನ್ನು ದಾಖಲಿಸಲಾಗಿದ್ದು, ಅವರ ಜಾಗತಿಕ ಜಾಲವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !