August 26, 2026
Wednesday, August 26, 2026
spot_img

ಮಧ್ಯಾಹ್ನದ ಊಟಕ್ಕೆ ಒಂದೊಳ್ಳೆ ಹೀರೇಕಾಯಿ ಬೇಳೆ ಸಾರು- ರುಚಿಕರ ಪಕೋಡ ಇದ್ರೆ ಮತ್ತೇನು ಬೇಕು ಹೇಳಿ!

ಹೀರೇಕಾಯಿ ಬೇಳೆ ಸಾರಿಗೆ ಬೇಕಾಗುವ ಪದಾರ್ಥಗಳು

ಹೀರೇಕಾಯಿ
ಬೇಳೆ
ಈರುಳ್ಳಿ
ಟೊಮ್ಯಾಟೊ
ಅರಿಶಿಣ
ಉಪ್ಪು
ಕಾಯಿ
ಸಾಂಬಾರ್‌ ಪುಡಿ
ಖಾರದಪುಡಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಹುಣಸೆಹಣ್ಣು

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಹೀರೇಕಾಯಿ, ಬೇಳೆ, ಈರುಳ್ಳಿ, ಟೊಮ್ಯಾಟೊ, ಅರಿಶಿಣ, ಉಪ್ಪು, ಜೀರಿಗೆ ಹಾಗೂ ನೀರನ್ನು ಹಾಕಿ ಕುಕ್ಕರ್‌ನಲ್ಲಿ ಮೂರು ವಿಶಲ್‌ ಕೂಗಿಸಿಕೊಳ್ಳಿ
ಆನಂತರ ಮಿಕ್ಸಿಗೆ ಕಾಯಿ, ಖಾರದಪುಡಿ, ಸಾಂಬಾರ್‌ ಪುಡಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹುಣಸೆಹುಳಿ ಹಾಕಿಕೊಂಡು ರುಬ್ಬಿ ಇಡಿ
ನಂತರ ಪಾತ್ರೆಗೆ ಎಣ್ಣೆ ಕರಿಬೇವು, ಹಿಂಗ್‌, ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ. ಆನಂತರ ಇದಕ್ಕೆ ಉಪ್ಪು ಹಾಕಿ, ನಂತರ ಕುಕ್ಕರ್‌ನ ಬೇಳೆ ಹಾಕಿ
ಆಮೇಲೆ ಮಿಕ್ಸಿಯ ಮಸಾಲೆ ಹಾಕಿ ಮಿಕ್ಸ್‌ ಮಾಡಿ, ಒಂದು ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಒಲೆ ಆಫ್‌ ಮಾಡಿದ್ರೆ ಸಾರು ರೆಡಿ.

ಪಕೋಡ ಮಾಡುವ ವಿಧಾನ
ಈರುಳ್ಳಿ
ಹಸಿಮೆಣಸು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಓಂಕಾಳು
ಉಪ್ಪು
ಸೋಡಾ
ಕೊತ್ತಂಬರಿ ಸೊಪ್ಪು
ಪುದೀನ
ಶುಂಠಿ

ಮಾಡುವ ವಿಧಾನ
ಮೊದಲು ಬೌಲ್‌ಗೆ ತೆಳುವಾಗಿ ಹೆಚ್ಚಿರುವ ಈರುಳ್ಳಿ ಹಾಕಿಕೊಳ್ಳಿ
ಇದಕ್ಕೆ ಹಸಿಮೆಣಸು, ಓಂಕಾಳು, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಹಾಗೂ ಶುಂಠಿ ಜಜ್ಜಿ ಹಾಕಿ
ನಂತರ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸೋಡಾಪುಡಿ ಹಾಕಿ ಕೈಯಲ್ಲಿ ಮಿಕ್ಸ್‌ ಮಾಡಿ
ಇದಕ್ಕೆ ಸ್ವಲ್ಪವೇ ನೀರು ಹಾಕಿ ಮಿಕ್ಸ್‌ ಮಾಡಿ ಇಟ್ಟುಕೊಳ್ಳಿ. ನಂತರ ಕಾದ ಎಣ್ಣೆಗೆ ಪಕೋಡ ಉದುರುದುರಾಗಿ ಹಾಕಿ ಗೋಲ್ಡನ್‌ ಬ್ರೌನ್‌ ಆಗುವವರೆಗೂ ಫ್ರೈ ಮಾಡಿದ್ರೆ ಬೋಂಡ ರೆಡಿ.

ಬಿಸಿ ಬಿಸಿ ಬೇಳೆ ಸಾರು, ಅನ್ನ ಹಾಗೂ ಪಕೋಡೆ ಸಿಕ್ಕರೆ ಇದಕ್ಕಿಂತ ಸ್ವರ್ಗ ಇನ್ನೆಲ್ಲಿದೆ! ಅಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !