ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ಮಿನಿ ಗೂಡ್ಸ್ ವಾಹನವೊಂದು ಕಣಿವೆಗೆ ಉರುಳಿ ಬಿದ್ದಿದ್ದು, ಹದಿನೇಳು ಮಂದಿ ಮೃತಪಟ್ಟಿದ್ದಾರೆ.
ಜಜ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್ ಬಳಿ ಮಿನಿ ಗೂಡ್ಸ್ ಕಣಿವೆಗೆ ಉರುಳಿದೆ. ಸರಕು ತುಂಬುವ ವಾಹನದಲ್ಲಿ ಜನರು ಸಂಚರಿಸುತ್ತಿದ್ದು, ವಾಹನ ಸ್ಕಿಡ್ ಆಗಿ ಕಣಿವೆಗೆ ಉರುಳಿ ಬಿದ್ದಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.