ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಅದ್ದೂರಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕತಾರ್‌ ನಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಭಾನುವಾರ ರಾತ್ರಿ ಅದ್ದೂರಿಯಾಗಿ ಚಾಲನೆ ಸಿಕ್ಕಿತು.

ಒಂದು ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಕತಾರ್‌ನ ಸಾಂಸ್ಕೃತಿಕ ಪರಂಪರೆಯೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯ ಅನಾವರಣ ಮೂಲಕ ಫುಟ್‌ಬಾಲ್‌ ಟೂರ್ನಿಯ ಸಂಭ್ರಮ ಶುರುವಾಯಿತು.

ಲಾವಿದರ ಆಕರ್ಷಕ ನೃತ್ಯ , ಐದು ಬಾರಿಯ ಆಸ್ಕರ್‌ ಪ್ರಶಸ್ತಿ ವಿಜೇತ ಅಮೆರಿಕದ ಹಿರಿಯ ನಟ ಮಾರ್ಗನ್‌ ಫ್ರೀಮನ್‌ ಅವರ ವಾಯ್ಸ್‌ ಓವರ್‌ ವಿಡಿಯೋ ಕಾರ್ಯಕ್ರಮಕ್ಕೆ ಮೆರಗು ನೀಡಿತು.


2010ರ ವಿಶ್ವಕಪ್‌ನ ಪ್ರಖ್ಯಾತ ಧ್ಯೇಯಗೀತೆ, ವಾಕಾ ಹಾಗೂ ಈ ಬಾರಿಯ ವಿಶ್ವಕಪ್‌ನ ಧ್ಯೇಯಗೀತೆ ಫೀಲ್‌ ದ ಮ್ಯಾಜಿಕ್‌ ಇನ್‌ ದ ಏರ್‌ ಹಾಡನ್ನು ಮಿಶ್ರಣ ಮಾಡಿ ಅದ್ಭುತ ನೃತ್ಯವನ್ನು ಕಲಾವಿದರು ಮಾಡಿದರು.

ಈ ವೇಳೆ ಎಲ್ಲಾ ದೇಶಗಳ ಧ್ವಜಗಳನ್ನು ಕಲಾವಿದರು ಹಾರಿಸುತ್ತಾ ವೇದಿಕೆಯಲ್ಲಿ ನಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!