ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಡಿಗೆ ತಾಯ್ತನ ಮೂಲಕ ಅಜ್ಜಿಯೇ ಮೊಮ್ಮಗುವಿಗೆ ಜನ್ಮ ನೀಡಿದ್ದಾರೆ. ಹೌದು, ಮಗ-ಸೊಸೆಯ ಮಗುವಿಗೆ ಅಜ್ಜಿಯೇ ಹೆತ್ತ ತಾಯಿಯಾಗಿದ್ದಾರೆ.
ಗರ್ಭಕೋಶ ತೆಗೆದುಹಾಕಿದ್ದರಿಂದ ಸೊಸೆಗೆ ಮಕ್ಕಳಾಗುವುದಿಲ್ಲ ಎಂದು ಅರಿತ ಅಜ್ಜಿ, ಮಗ-ಸೊಸೆಯ ಮಗುವಿಗೆ ತಾಯಿಯಾಗಿದ್ದಾರೆ. ವಾಷಿಂಗ್ಟನ್‌ನ 56 ವರ್ಷದ ನ್ಯಾನ್ಸಿ ಮೊಮ್ಮಗುವಿಗೆ ಜನ್ಮ ನೀಡಿದ್ದಾರೆ. ಜೆಫ್ ಹಾಕ್ ಮತ್ತು ಕ್ಯಾಂಬ್ರಿಯಾ ಬಾಡಿಗೆ ತಾಯಿಯಾಗುತ್ತೀರಾ ಎಂದು ಅಮ್ಮನನ್ನೇ ಕೇಳಿದ್ದು, ನ್ಯಾನ್ಸಿಗೆ ಇಲ್ಲ ಎನ್ನಲು ಆಗಲಿಲ್ಲ. ಕರ್ತವ್ಯ ಎಂದು ಭಾವಿಸಿ ಒಪ್ಪಿಕೊಂಡಿದ್ದಾರೆ.
ಇದೀಗ ಮಗು, ತಾಯಿ ಎಲ್ಲರೂ ಆರೋಗ್ಯವಾಗಿದ್ದಾರೆ. ನ್ಯಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಒಂದು ಸುಂದರ ಕ್ಷಣ, ನನ್ನ ತಾಯಿ ನನ್ನ ಮಗುವಿಗೆ ಜನ್ಮ ನೀಡುವುದನ್ನು ಕಣ್ತುಂಬಿಕೊಳ್ಳೋಕೆ ಎಷ್ಟು ಜನರಿಗೆ ಸಾಧ್ಯ, ನಾನು ಅದೃಷ್ಟವಂತ ಎಂದು ಹೇಳಿಕೊಂಡಿದ್ದಾರೆ.