Sunday, February 5, 2023

Latest Posts

ಖ್ಯಾತ ಗಮಕಿ ಮತ್ತು ಹಿರಿಯ ಗಾಯಕ ಚಂದ್ರಶೇಖರ ಕೆದ್ಲಾಯ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಖ್ಯಾತ ಗಮಕ ಕಲಾವಿದ ಮತ್ತು ಸುಗಮ ಸಂಗೀತದ ಮೇರು ಗಾಯಕ ಮತ್ತು ನಿವೃತ್ತ ಅಧ್ಯಾಪಕ ಚಂದ್ರಶೇಖರ ಕೆದ್ಲಾಯ ಅವರು ಘದಾಯಾಘಾತದಿಂದ ಇಂದು ಬೆಳಿಗ್ಗೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಎಸ್‌.ಚಂದ್ರಶೇಖರಾ ಕೆದ್ಲಾಯ ಅವರು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಕೆದ್ಲಾಯ ಅವರು 1950 ಏಪ್ರಿಲ್‌ 23ರಂದು ಉಡುಪಿ ಜಿಲ್ಲೆಯ ಹೆಸ್ಕತ್ತೂರು ಗ್ರಾಮದ ಹಾರಾಡಿಯಲ್ಲಿ ಜನಿಸಿದರು.

ಕೆದ್ಲಾಯ ಅವರು ಕೆನರಾ ಪ್ರೌಢ ಶಾಲೆ ಮತ್ತು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಖ್ಯಾತ ಗಮಕಿ ಕಲಾವಿದರಾಗಿದ್ದ ಕೆದ್ಲಾಯರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಣ ಪ್ರಶಸ್ತಿ ಹಾಗೂ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!