Sunday, December 3, 2023

Latest Posts

ಶೋಭಾಯಾತ್ರೆ ನಂತರ ಸ್ವಚ್ಚತಾ ಕಾರ್ಯ ನಡೆಸಿದ ಜೋಗಿಮಟ್ಟಿ ಗೆಳೆಯರ ಬಳಗ

ಹೊಸದಿಗಂತ ವರದಿ ಚಿತ್ರದುರ್ಗ:

ನಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಭಾನುವಾರ ಅದ್ದೂರಿಯಾಗಿ ನಡೆಯಿತು. ಲಕ್ಷಾಂತರ ಸಂಖ್ಯೆಯ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಆದರೆ ಜೋಗಿಮಟ್ಟಿ ಗೆಳೆಯರ ಬಳಗದ ಕಾರ್ಯಕರ್ತರು ನಗರದಲ್ಲಿನ ಚಳ್ಳಕೆರೆ ಮುಖ್ಯರಸ್ತೆಯಿಂದ ಮದಕರಿ ನಾಯಕ ವೃತ್ತದತನಕ ಶ್ರೀ ಬಸವ ನಾಗೀದೇವ ಶರಣರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು.

ಚಿತ್ರದುರ್ಗದ ಜೋಗಿಮಟ್ಟಿ ಗೆಳೆಯರ ಬಳಗದ ಯುವಕರೊಂದಿಗೆ ಗೌತಮ ಸೇನೆ ಮತ್ತು ಅಂಬೇಡ್ಕರ್ ಸೇನೆ ಸಂಘಟನೆಗಳು ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆದ ನಂತರ ರಸ್ತೆಯ ತುಂಬಾ ಬಿದ್ದಿದ್ದ ತ್ಯಾಜ್ಯವನ್ನು ಸ್ವಚ್ಛ ಮಾಡಿದರು.

ಚಲವಾದಿ ಗುರುಪೀಠದ ಶ್ರೀ ಬಸವ ನಾಗೀದೇವ ಶರಣರು ಸ್ವತಃ ಮದಕರಿ ವೃತ್ತವನ್ನು ಸ್ವಚ್ಚಗೊಳಿಸುವ ಮೂಲಕ ಮಾದರಿಯಾದರು. ಈ ವೇಳೆ ಮಾತನಾಡಿದ ಅವರು ಸಮಾಜದಲ್ಲಿ ಯುವಶಕ್ತಿಯ ಪಾತ್ರ ಬಹಳ ಪ್ರಮುಖವಾದುದ್ದು. ಆದರೆ ಯುವ ಸಮೂಹ ಡಿ.ಜೆ. ಮುಂದೆ ಕುಣಿದು ಕುಪ್ಪಳಿಸಿದರೆ, ನಮ್ಮ ಜೋಗಿಮಟ್ಟಿ ಗೆಳೆಯರ ಬಳಗದ ತಂಡ ಸಾರ್ವಜನಿಕರಿಂದ ರಸ್ತೆ ತುಂಬಾ ತುಂಬಿದ್ದ ತ್ಯಾಜ್ಯವನ್ನ ಸ್ವಚ್ಚ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಿ ಸಂಘಟನೆಯಲ್ಲಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಚ ಮಾಡುವ ಕಾರ್ಯದೊಂದಿಗೆ ಮದ್ಯಾಹ್ನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದು ಖುಷಿ ತಂದಿದೆ ಎಲ್ಲರೂ ಸೇರಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ನಮ್ಮೊಂದಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಸ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಎಲ್.ಮಂಜುನಾಥ್ ಖಜಾಂಚಿ ರವಿಕುಮಾರ್ ಬಿ., ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಪಾಟೀಲ್, ಪರಮೇಶ್, ಹೋಟೆಲ್ ತಿಮ್ಮಣ್ಣ, ಸುರೇಶ್‌ಮಠ, ಮಂಜು, ಗೌತಮ ಸೇನೆಯ ಅಧ್ಯಕ್ಷ ಮಂಜುನಾಥ್ ಮತ್ತು ಕಾರ್ಯದರ್ಶಿ ಸಿ.ಎ.ತಿಪ್ಪೇಸ್ವಾಮಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರುದ್ರಮುನಿ ಮತ್ತಿತರರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!