ಅಂಗಡಿ ಬಳಿ ಕುಳಿತಿದ್ದ ಆರ್‌ಜೆಡಿ ನಾಯಕನ ಭೀಕರ ಕೊಲೆ, ಗುಂಡಿಟ್ಟು ಪರಾರಿಯಾದ ಗುಂಪು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೊದಲ ಬಾರಿಗೆ ಚುನಾಯಿತರಾಗಿದ್ದ ಕೌನ್ಸಿಲರ್‌, ಆರ್‌ಜೆಡಿ ನಾಯಕನನ್ನು ಬೈಕ್‌ನಲ್ಲಿ ಬಂದ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರ್‌ನಲ್ಲಿ ನಡೆದಿದೆ.

ಸ್ಥಳೀಯ ಕೌನ್ಸಿಲರ್ ಪಂಕಜ್ ರೈ ಹತ್ಯೆಯಾದವರು. ಮಂಗಳವಾರ ಸಂಜೆ ಬಿಹಾರದ ಹಾಜಿಪುರದಲ್ಲಿರುವ ತಮ್ಮ ನಿವಾಸದ ಬಳಿಯ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದರು. ದ್ವಿಚಕ್ರವಾಹನದಲ್ಲಿ ಬಂದ ಮೂವರು ರೈ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಹಾಜಿಪುರದ ವಾರ್ಡ್‌ ನಂ.5 ರಲ್ಲಿ ಮೊದಲ ಬಾರಿಗೆ ಚುನಾಯಿತರಾದ ಕೌನ್ಸಿಲರ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಸದಸ್ಯ ರೈ ಆತ್ಮರಕ್ಷಣೆಗೆ ಮನೆ ಕಡೆ ಓಡಿದರು. ಆದಾಗ್ಯೂ, ದಾಳಿಕೋರರು ಹಿಂಬಾಲಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದು ಕೇಳಿದ ಕೂಡಲೇ ಆತನ ಮನೆಯವರು ಮತ್ತು ಸ್ಥಳೀಯರು ಧಾವಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ರೈ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!