ಹೊಸದಿಗಂತ ವರದಿ, ಗದಗ :
ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹೊರಟಿದ್ದ ಪೊಲೀಸ್ ಸಿಬ್ಬಂದಿಗೆ ವಿಧಿಯ ರೂಪದಲ್ಲಿ ಕಾಂಕ್ರಿಟ್ ಲಾರಿ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಭೂಮರಡ್ಡಿ ವೃತ್ತದಲ್ಲಿ ಶುಕ್ರವಾರ ಜರುಗಿದೆ.
ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಮೇಶ ಡಂಬಳ (೪೫) ಎಂಬ ದುರ್ದೈವಿ.
ನೈಟ್ ಡ್ಯೂಟಿ ಮುಗಿಸಿ ಗಣೇಶ ಉತ್ಸವದ ಅಂಗವಾಗಿ ಮಾರ್ಕೆಟ್‌ನಿಂದ ಹಣ್ಣು, ತರಕಾರಿ, ಪೂಜಾ ಸಾಮಗ್ರಿ ಖರೀಧಿಸಿ ಪೊಲೀಸ್ ಕ್ವಾಟರ್ಸನಲ್ಲಿರುವ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ಮಾರ್ಕೆಟ್ ಏರಿಯಾದಿಂದ ಎಪಿಎಂಸಿಗೆ ಹೊರಟಿದ್ದ ಕಾಂಕ್ರಿಟ್ ಲಾರಿ ಓವರ್ ಟೆಕ್ ಮಾಡಿ ಹೋಗುವಾಗ ಅಪಘಾತ ನಡೆದು ಲಾರಿ ಗಾಲಿ ತಲೆಯ ಮೇಲೆ ಹರಿದು ರಮೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಿಂದಾಗಿ ಭೂಮರೆಡ್ಡಿ ಸರ್ಕಲ್‌ನಲ್ಲಿ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಈ ಕುರಿತು ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ