ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಪುಲಕೇಶಿನಗರದಲ್ಲಿ ವಾಸವಾಗಿದ್ದ ಟರ್ಕಿ ದೇಶದ ಬಿಯೋನಾಜ್ (39), ಆಕೆಯ ಸಹಚರ ಒಡಿಶಾದ ಜಿತೇಂದ್ರ ಸಾಹು (43), ಪ್ರಮೋದ್ ಕುಮಾರ್ (31), ಮನೋಜ್ ದಾಸ್ (23) ಸೌಮಿತ್ರ ಚಂದ್ (26), ಪ್ರಕಾಶ್ (32), ವೈಶಾಕ್ (22), ಗೋವಿಂದರಾಜು (34) ಮತ್ತು ನಂದಿನಿಲೇಔಟ್ ನಿವಾಸಿ ಅಕ್ಷಯ್ (32)ನನ್ನ ಪೊಲೀಸರು ಬಂಧಿಸಿದ್ದರು.
ಅದರಲ್ಲಿ ಆರೋಪಿ ಗೋವಿಂದರಾಜು ಪಿಂಪ್ ಕೆಲಸ ಮಾಡುತ್ತಿದ್ದ ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಒಂದು ಕಾಲದಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಟೆಕ್ಕಿಗೆ ಕಂಟಕವಾಗಿದ್ದು, ಈತನೇ ಸೃಷ್ಟಿಸಿದ್ದ ಆ್ಯಪ್. ಪರಿಣಾಮ ಬಿಇ ಪದವೀಧರ ಇಂದು ವೇಶ್ಯಾವಾಟಿಕೆಯ ಪಿಂಪ್ ಆಗಿದ್ದಾನೆ.
ಷೇರ್ ಮಾರ್ಕೆಟ್ ಚಟಕ್ಕೆ ಬಿದ್ದಿದ್ದ ಗೋವಿಂದರಾಜು ತಾನು ದುಡಿದಿದ್ದ ಎಲ್ಲ ಹಣವನ್ನೂ ಷೇರ್ಸ್ಗೆ ಹಾಕುತ್ತಿದ್ದ. ಕೊನೆಗೆ ಎಷ್ಟೇ ದುಡಿದರೂ ಕೂಡ ಹಣ ಕೈಗೆ ಬರುತ್ತಿರಲಿಲ್ಲ. ಸಾಲ ಕೂಡ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ತಿಂಗಳ ಸಂಬಳ ಸಾಲ ತೀರಿಸೋಕೆ ಸರಿ ಹೋಗ್ತಿತ್ತು. ಈ ಸಂದರ್ಭದಲ್ಲಿ ತನ್ನ ಕಮ್ಯೂನಿಕೇಷನ್ಗೆ ಎಂದು ಒಂದು ಆ್ಯಪ್ ಸೃಷ್ಟಿಸಿಕೊಂಡಿದ್ದ. ಮೊದಮೊದಲು ಗೆಳೆಯರ ಜೊತೆ ಸಂವಹನ ಮಾಡಲಷ್ಟೆ ಆ್ಯಪ್ ಬಳಕೆ ಆಗ್ತಿತ್ತು.
ಇದೇ ಕೆಲಸದ ಮೂಲಕ ಸಂಪರ್ಕಕ್ಕೆ ಬಂದವಳೇ ಕಿಂಗ್ ಪಿನ್ ಬಿಯೋನಾಜ್. 15 ವರ್ಷದ ಹಿಂದೆ ಸೆಲ್ವ ಎಂಬಾತನನ್ನ ಮದ್ವೆಯಾಗಿದ್ದ ಟರ್ಕಿ ಮಹಿಳೆ ಬಿಯೋನಾಜ್, ಟೂರಿಷ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು. ನಂತರ ಮದ್ವೆಯಾಗಿ ಇವರಿಬ್ಬರಿಗೆ ಒಂದು ಮಗು ಕೂಡ ಇದೆ. ಈಕೆಯ ಪತಿ ಸೆಲ್ವನಿಗೆ ಟಿ.ಬಿ ಖಾಯಿಲೆ ಇದೆ. ಬರಬರುತ್ತ ಖಾಯಿಲೆ ಹೆಚ್ಚಾಗುತ್ತಿದ್ದಂತೆ ಬಿಯೋನಾಜ್ ದೂರವಾಗುವ ಸೂಚನೆ ಸಿಕ್ಕಿತ್ತು.
ನಂತರ ಈಕೆಗೆ ಕೈಹಿಡಿದಿದ್ದೇ ಹೈಟೆಕ್ ವೇಶ್ಯಾವಾಟಿಕೆ. ಕಳೆದ 10 ವರ್ಷದಿಂದ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.