ಹೈಸ್ಕೂಲ್ ಹುಡುಗಿಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಎರಡು ಕೇಜಿ ತೂಕದ ಕೂದಲ ರಾಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಲಕ್ಕಾಡ್‌ನ ಹೈಸ್ಕೂಲ್ ವಿದ್ಯಾರ್ಥಿನಿಯ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಬರೋಬ್ಬರಿ ಎರಡು ಕೇಜಿ ತೂಕದ ಕೂದಲ ರಾಶಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ!

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಈ ಬಾಲಕಿಯನ್ನು ಪರೀಕ್ಷೆಗೊಳಪಡಿಸಿದಾಗ ಹೊಟ್ಟೆ ಯಲ್ಲಿ ಕೂದಲು ಸಂಗ್ರಹವಾಗಿರುವುದು ಕಂಡುಬಂತು. ತಕ್ಷಣವೇ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈ ವೇಳೆ 30 ಸೆಂ.ಮೀ ಉದ್ದ, 15 ಸೆಂ.ಮೀ ಅಗಲದ ಕೂದಲ ರಾಶಿ ಪತ್ತೆಯಾಗಿದೆ. ಇದು ಹೊಟ್ಟೆಯ ಆಕಾರದಲ್ಲಿಯೇ ಸ್ಥಿತಿಗೊಂಡಿತ್ತು. ಇದೀಗ ಬಾಲಕಿ ಸಂಪೂರ್ಣ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು? ಯಾಕಿದು?
ವೈದ್ಯಕೀಯ ಕ್ಷೇತ್ರದಲ್ಲಿ ಈ ಸ್ಥಿತಿಯನ್ನು ಟ್ರೈಕೊಬಿಸೈರ್ ಎಂದು ಕರೆಯಲಾಗುತ್ತದೆ. ಅತಿಯಾದ ಆಕಾಂಕ್ಷೆಗಳು, ಒತ್ತಡದ ಹಿನ್ನೆಲೆಯಲ್ಲಿ ಕಚ್ಚಿ ನುಂಗಿದ ಕೂದಲು ಹೊಟ್ಟೆಯಲ್ಲಿ ಸಿಕ್ಕು ಆಹಾರದ ಜೊತೆಗೆ ಗಡ್ಡೆಯಾಗುತ್ತದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!