ದಿಗಂತ ವರದಿ ಕಾರವಾರ :
ಭಾರಿ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಅಡಿಯಲ್ಲಿ ಸಿಲುಕಿದ ವ್ಯಕ್ತಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
7.30 ಸಮಯಕ್ಕೆ ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಹತ್ತಿರ ಗುಡ್ಡ ಕುಸಿದು ತಿಕರ್ಸ್ ಗುರುವ್ ಎನ್ನುವವರು ಮಣ್ಣಿನಡಿ ಸಿಲುಕಿದ್ದರು. ಅವರನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ಮುಗಿಯುವ ವೇಳೆಗೆ ತಿಕರ್ಸ್ ಉಸಿರುಚೆಲ್ಲಿದ್ದು, ಅವರ ಮೃತದೇಹ ಪತ್ತೆಯಾಗಿದೆ.