ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯ ಮುಂಗಾರು ಅಧಿವೇಶನದ ಎರಡನೇ ದಿನ ಎಚ್.ಡಿ.ರೇವಣ್ಣ ಇಂದು ವಿಧಾನಸೌಧದಲ್ಲಿ ಮಾತನಾಡಿದ್ದಾರೆ, ನನ್ನ ಮಗ ತಪ್ಪು ಮಾಡಿದ್ದರೆ ನೇಣಿಗೇರಿಸಬೇಕು ಎಂದು ತಿಳಿಸಿದ್ದಾರೆ.
ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ತಪ್ಪಿತಸ್ಥನಾಗಿದ್ದರೆ ಗಲ್ಲಿಗೇರಿಸಲಿ ನಾನು ವಹಿಸಿಕೊಡು ಬರಲ್ಲ ಎಂದು ನೆರೆದಿದ್ದ ಶಾಸಕರ ಎದುರು ರೇವಣ್ಣ ಹೇಳಿದರು.
ಇನ್ನು ನನ್ನ ಬಗ್ಗೆ, ಆರೋಪ ಮಾಡಲಾಗಿದೆ. ಹೆಣ್ಣು ಮಗಳನ್ನು ಕರೆದುಕೊಂಡು ಬಂದು ಡಿಜಿ ದೂರು ಬರೆಸಿಕೊಳ್ಳುತ್ತಾರೆ ಎಂದರೆ ಅವನು ಡಿಜಿ ಆಗಲು ಲಾಯಕ್ಕಾ? ಎಂದು ಕೂಗಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಹಳ ಅನ್ಯಾಯವಾಗಿದ್ದರೆ ನೋಟಿಸ್ ಕೊಡಿಸಿ. ಚರ್ಚೆ ಮಾಡೋಣ ಎಂದು ತಿಳಿಸಿದರು.