ದೇಶಕ್ಕೆ ಐತಿಹಾಸಿಕ ದಿನ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರಾಖಂಡ ಸರಕಾರ ಸೋಮವಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದೆ. ಈ ಮೂಲಕ ದೇಶದಲ್ಲಿ ಮೊದಲು ಜಾರಿಗೆ ತಂದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಏಕರೂಪ ನಾಗರಿಕ ಸಂಹಿತೆಗೆ ಸಿದ್ದ ಪಡಿಸಲಾಗಿರುವ ಪೋರ್ಟಲ್ ಮತ್ತು ನಿಯಮ ಹಾಗೂ ಗೆಜೆಟ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದರು.

ಡೆಹ್ರಾಡೂನ್​ನಲ್ಲಿ ನಡದ ಕಾರ್ಯಕ್ರಮದಲ್ಲಿ ಮಾತನಾಡಿದ ಧಾಮಿ ಅವರು, ಈ ಮೂಲಕ ಸ್ವಾತಂತ್ರ್ಯದ ನಂತರ ಯುಸಿಸಿಯನ್ನು (UCC) ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಉತ್ತರಾಖಂಡ ರಾಜ್ಯವಾಗಿದೆ. ‘ಡಿಜಿಟಲ್ ಕ್ರಮಗಳು, ಆನ್‌ಲೈನ್ ಮಾಧ್ಯಮದ ಮೂಲಕ ನೋಂದಣಿ, ಮನವಿ ಮತ್ತು ಇತರ ಸೇವೆಗಳನ್ನು ಜನರಿಗೆ ಅನುಕೂಲಕರವಾಗಿಸುತ್ತದೆ’” ಹಾಗೂ ಈ ಕಾನೂನು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಖಾತ್ರಿಪಡಿಸುವ ಮೂಲಕ ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ ಎಂದು ಅವರು ಹೇಳಿದರು.

ಇಂದು, ಉತ್ತರಾಖಂಡದಲ್ಲಿ ಯುಸಿಸಿಯನ್ನು ಜಾರಿಗೊಳಿಸುವ ಮೂಲಕ, ನಾವು ಸಂವಿಧಾನದ ನಿರ್ಮಾತೃಗಳಾದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಸಂವಿಧಾನ ಸಭೆಯ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನಮ್ಮ ನಿಜವಾದ ಗೌರವವನ್ನು ಸಲ್ಲಿಸುತ್ತಿದ್ದೇವೆ ಹಾಗೂ ಈ ಕ್ಷಣದಿಂದಲೇ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ ಮತ್ತು ಉತ್ತರಾಖಂಡ ರಾಜ್ಯದ ಎಲ್ಲಾ ನಾಗರಿಕರ ಸಾಂವಿಧಾನಿಕ ಮತ್ತು ನಾಗರಿಕ ಹಕ್ಕುಗಳು ಸಮಾನವಾಗಿವೆ ಮತ್ತು ಈ ಕ್ಷಣದಿಂದ ಎಲ್ಲಾ ಧರ್ಮಗಳ ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆತಿವೆ ಎಂದರು.

ಏಕರೂಪ ನಾಗರಿಕ ಸಂಹಿತೆ ಎಂದರೆ…
ಏಕರೂಪ ನಾಗರಿಕ ಸಂಹಿತೆ ಎಂಬುದು ಎಲ್ಲ ಧರ್ಮಗಳಾದ್ಯಂತ ವೈಯಕ್ತಿಕ ಕಾನೂನುಗಳನ್ನು ಪ್ರಮಾಣೀಕರಿಸುವ ಗುರಿಯನ್ನು ಹೊಂದಿರುವ ಕಾನೂನುಗಳ ಒಂದು ಗುಂಪಾಗಿದೆ. ಸದ್ಯ ಈ ಕಾನೂನು ದೇಶದಾದ್ಯಂತ ಪರ – ವಿರೋಧದ ಎರಡು ಅಲೆಯನ್ನೂ ಹುಟ್ಟುಹಾಕಿದೆ. ಒಂದೆಡೆ ಇದರ ಪ್ರತಿಪಾದಕರು ಸಮಾನತೆಗಾಗಿ ವಾದಿಸಿದರೆ, ಮತ್ತೊಂದೆಡೆ ಇದರ ವಿರೋಧಿಗಳು ಸಂಭಾವ್ಯ ಸಾಮಾಜಿಕ ವಿಭಜನೆಗಳ ಬಗ್ಗೆ ಎಚ್ಚರಿಕೆ ನೀಡುತ್ತಾರೆ.ಇನ್ನು ಏಕರೂಪ ನಾಗರಿಕ ಸಂಹಿತೆ (UCC) ಭಾರತಕ್ಕೆ ಒಂದು ಕಾನೂನನ್ನು ರೂಪಿಸಲು ಕರೆ ನೀಡುತ್ತದೆ, ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮುಂತಾದ ವಿಷಯಗಳಲ್ಲಿನ ನಿರ್ಧಾರಗಳಲ್ಲಿ ಏಕರೂಪ ನಿಯಮವನ್ನು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯಿಸುವುದನ್ನು ಪ್ರತಿನಿಧಿಸುತ್ತದೆ.

2022 ರ ಉತ್ತರಾಖಂಡ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮರು ಆಯ್ಕೆಯಾದರೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವುದಾಗಿ ವಾಗ್ದಾನ ಮಾಡಿದ್ದರು. ಇದಾದಾ ನಂತೆ ಅವರ ಮರು ಆಯ್ಕೆಯಾದ ಸರ್ಕಾರವು 2.3 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಪ್ರತಿಕ್ರಿಯೆಯನ್ನು ಒಳಗೊಂಡಿರುವ ಕೋಡ್ ಅನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಐದು ಸದಸ್ಯರ ಸಮಿತಿಯನ್ನು ರಚಿಸಿತ್ತು.
740 ಪುಟಗಳ ಕರಡನ್ನು ಫೆಬ್ರವರಿ 2, 2024 ರಂದು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಯಿತು ಮತ್ತು ಫೆಬ್ರವರಿ 4 ರಂದು ಕ್ಯಾಬಿನೆಟ್ ಅನುಮೋದನೆ ನೀಡಲಾಯಿತು. ಇದನ್ನು ಫೆಬ್ರವರಿ 6 ರಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿ ಮರುದಿನ ಅಂಗೀಕರಿಸಲಾಯಿತು. ನಂತರ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಅವರು ಫೆಬ್ರವರಿ 28 ರಂದು ತಮ್ಮ ಅನುಮೋದನೆಯನ್ನು ನೀಡಿದರು, ನಂತರ ಮಾರ್ಚ್ 11 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮಸೂದೆಗೆ ಸಹಿ ಹಾಕಿವು ಮೂಲಕ ಅಧಿಕೃತಗೊಳಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!