ಹೊಸದಿಗಂತ ವರದಿ ಹುಬ್ಬಳ್ಳಿ:
ಬಾಲಕಿ ಹತ್ಯೆ ಮಾಡಿದ ಆರೋಪಿ ರಿತೇಶ ಕುಮಾರ ಪೊಲೀಸ್ ಮೇಲೆ ಹಲ್ಲೆ ನಡೆಸಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿದ ಪಿಎಸ್ ಐ ಅನ್ನಪೂರ್ಣ ಆರ್. ಅವರಿಗೆ ಸಾರ್ವಜನಿಕರಿಂದ ಅಭಿನಂದನೆ ಮಹಾಪೂರವೇ ಹರಿದುಬರುತ್ತಿದೆ.
ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಪಿಎಸ್ ಐ ಅನ್ನಪೂರ್ಣ ಅವರ ಸಾಹಸ ದ ಬಗ್ಗೆ ಚರ್ಚೆ ಆಗುತ್ತಿದೆ. ಲೇಡಿ ಸಿಂಗಮ್, ರಾಣಿ ಚೆನ್ನಮ್ಮ ಎಂಬ ಹೆಸರಿನಿಂದ ವರ್ಣಿಸಲಾಗುತ್ತಿದೆ.
ಆರೋಪಿಯನ್ನು ತಾರಿಹಾಳದ ಸೇತುವೆ ಹತ್ತಿರವಿರುವ ಆತನ ಮನೆಯಲ್ಲಿ ಪರಿಶೀಲನೆ ಹೋದಾಗ ಪೊಲೀಸ್ ವಾಹನದ ಮೇಲೆ ಕಲ್ಲಿನಿಂದ ಹೊಡೆದು, ಬಳಿಕ ಅವರ ಮೇಲು ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಪಿಎಸ್ ಐ ಅನ್ನಪೂರ್ಣ ಮೊದಲು ಮೂರು ಸುತ್ತು ಗುಂಡು ಹಾರಿಸಿದರು. ಬಳಿಕ ಆರೋಪಿಯು ಅದಕ್ಕೆ ಬೆದರದೇ ಇದ್ದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ.