ಹೊಸದಿಗಂತ ವರದಿ, ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಸೋಮಣ್ಣ ಎಂಬವರ ಕೆಸದ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಕೆಸದ ಹೊಲದಲ್ಲಿ ಕಳೆ ತೆಗೆಯುವ ಸಂದರ್ಭದಲ್ಲಿ ಮಹಿಳೆಯರು ಹಾವನ್ನು ಗಮನಿಸಿದ್ದು, ನಂತರ ಕಣಿವೆಯ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಯಿತು.
ಅರಣ್ಯ ರಕ್ಷಕರಾದ ವೇದ, ಮತ್ತು ಅರುಣ್ ಅವರು ಹೆಬ್ಬಾವನ್ನು ಸೆರೆ ಹಿಡಿದು ಸೀಗೆಹೊಸೂರು ಸಮೀಪದ ಜೇನುಕಲ್ಲು ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಗ್ರಾಮಸ್ಥರಾದ ಶ್ರೀನಿವಾಸ, ಕುಶಲ, ಸೋಮಣ್ಣ ಇತರರು ಇದ್ದರು.