ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ: ರಷ್ಯಾ ಬಂಡುಕೋರ ಪ್ರಿಗೋಜಿನ್ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ದಂಗೆದ್ದ ವ್ಯಾಗ್ನರ್‌ ಬಂಡುಕೋರ ಸೇನಾ ಗುಂಪಿನ ನಾಯಕ ಯೆವ್‌ಗೆನಿ ಪ್ರಿಗೋಜಿನ್‌ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾ ಅಧಿಕೃತ ಪ್ರಕಟಣೆಯಲ್ಲಿ ಹೇಳಿತ್ತು.

ಆದ್ರೆ ಇದೀಗ ಖುದ್ದು ಯೆವ್‌ಗೆನಿ ಪ್ರಿಗೋಜಿನ್‌ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ ಯೆವ್‌ಗೆನಿ ಪ್ರಿಗೋಜಿನ್‌ ಹೇಳಿದ್ದಾರೆ.
ಆಗಸ್ಟ್ 23ಕ್ಕೆ ವಿಮಾನ ದುರಂತ ನಡೆದರೆ, ಆಗಸ್ಟ್ 26ಕ್ಕೆ ರಷ್ಯಾ ಪ್ರಿಗೋಜಿನ್ ಸಾವನ್ನು ಖಚಿತಪಡಿಸಿತ್ತು.

ಆದ್ರೆ ಇದೀಗ ಮಿಲಿಟರಿ ಸಮವಸ್ತ್ರ ಧರಿಸಿರುವ ಯೆವ್‌ಗೆನಿ ಪ್ರಿಗೋಜಿನ್‌ ಮಿಲಿಟರಿ ವಾಹನದಲ್ಲಿ ಪ್ರಯಾಣ ಮಾಡುವ ವಿಡಿಯೋ ವೈರಲ್ ಆಗಿದ್ದು, ಅದ್ರಲ್ಲಿ .ತಾನು ಜೀವಂತವಾಗಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಕೆಲವರು ನನ್ನ ಸಾವು, ನನ್ನ ಜೀವನ, ಆದಾಯದ ಕುರಿತು ಮಾತನಾಡುತ್ತಿದ್ದಾರೆ. ಆದರೆ ನಾನು ಆರೋಗ್ಯವಾಗಿ, ಉತ್ತಮವಾಗಿದ್ದೇನೆ ಎಂದಿದ್ದಾರೆ.

ಆಗಸ್ಟ್ ತಿಂಗಳಲ್ಲಿ ನಾನು ಆಫ್ರಿಕಾದಲ್ಲಿದ್ದೇನೆ. ಚೆನ್ನಾಗಿದ್ದೇನೆ ಎಂದು ಇದೇ ವಿಡಿಯೋದಲ್ಲಿ ಪ್ರಿಗೋಜಿನ್ ಹೇಳಿದ್ದಾರೆ. ಕೆಲವರು ನಾನು ಪಲಾಯನ ಮಾಡಿದ್ದೇನೆ, ಆತನ ಆದಾಯವೆಷ್ಟು, ಲೈಫ್ ಸ್ಟೈಲ್ ಹೇಗಿದೆ ಎಂದು ಚರ್ಚಿಸುತ್ತಿದ್ದಾರೆ. ಎಲ್ಲವೂ ಚೆನ್ನಾಗಿದೆ ಎಂದು ವಿಡಿಯೋ ಅಂತ್ಯಗೊಳಿಸಿದ್ದಾರೆ. ಈ ವಿಡಿಯೋವನ್ನು ಆಗಸ್ಟ್ 20 ರಿಂದ 23ರೊಳಗೆ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಇದು ಪ್ರಿಗೋಜಿನ್ ಕೊನೆಯ ವಿಡಿಯೋ ಆಗಿದೆ. ಈ ವಿಡಿಯೋ ಬಳಿಕ ಪ್ರಿಗೋಜಿನ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎನ್ನುತ್ತಾರೆ.

ರಷ್ಯಾದ ವ್ಯಾಗ್ನರ್‌ ಪಡೆ ಸಂಸ್ಥಾಪಕ ಯೆವ್‌ಗೆನಿ ಪ್ರಿಗೋಜಿನ್‌ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾ ತನಿಖಾ ಸಂಸ್ಥೆ ಅಧಿಕೃತ ಹೇಳಿತ್ತು. ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆ, ‘ಘಟನಾ ಸ್ಥಳದಲ್ಲಿ ಸಿಕ್ಕ 10 ಜನರ ದೇಹವನ್ನು ವಿಧಿವಿಜ್ಞಾನ ಹಾಗೂ ಶವಪರೀಕ್ಷೆಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಇದೇ ಅಪಘಾತದಲ್ಲಿ ಯೆವ್‌ಗೆನಿ ಪ್ರಿಗೋಜಿನ್‌ ಮೃತಪಟ್ಟಿದ್ದಾರೆ ಎಂದಿತ್ತು.. ಪ್ರಿಗೋಜಿನ್‌ ಹಾಗೂ ಆತನ ಆಪ್ತರು ಸೇರಿ 10 ಮಂದಿ ಆ.23ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!