ಹೊಸದಿಗಂತ ವರದಿ ವಿಜಯಪುರ:
ಈಶ್ವರಪ್ಪಗೆ ಒಂದು ನ್ಯಾಯ, ಸಿದ್ದರಾಮಯ್ಯಗೆ ಒಂದು ನ್ಯಾಯಾನಾ ? ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡದ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟೆ, ಹೈಕಮಾಂಡ್ ಎರಡು ದಿನ ತಡಿಯೋಕೆ ಹೇಳಿತು, ನಾನು ಕೇಳದೆ ರಾಜೀನಾಮೆ ಕೊಟ್ಟೆ ಎಂದರು.
ನಿನ್ನ ಪರವಾಗಿದ್ದರೆ ಸತ್ಯ ಮೇವ ಜಯತೆ, ವಿರುದ್ಧವಾದರೆ ಭಂಡತನ ಎಂದು ರಾಜೀನಾಮೆ ನೀಡದ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಮಾಜಿ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣಗೆ ವಂಚನೆ ವಿಷಯಕ್ಕೆ ಪ್ರತಿಕ್ರಿಯಿಸಿ, ನನ್ನ ಹತ್ರಾ ಟಿಕೆಟ್ ಕೊಡಸ್ತಿನಿ ಅಂತ ಬಂದಿದ್ದರೆ ಮುಖಕ್ಕೆ ಬಾರಿಸ್ತಿದ್ದೆ. ಪ್ರಹ್ಲಾದ ಜೋಶಿ ಮೇಲೆ ಆರೋಪ ಬಂದಿರೋದು ದುರ್ದೈವ ಎಂದರು.