Friday, September 30, 2022

Latest Posts

ಅಮೆರಿಕದಲ್ಲಿ ನೆಲಕ್ಕಿಳಿಯಿತು ಯುದ್ಧ ಭೂಮಿಯ ದೈತ್ಯ: ಭಾರತೀಯ ಸೇನೆಗೂ ಕಾಡಿದೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಸೇನೆ ತನ್ನಲ್ಲಿದ್ದ ಚಿನೂಕ್ ಹೆಲಿಕಾಪ್ಟರ್‌ಗಳನ್ನು ನೆಲಕ್ಕಿಳಿಸಿದೆ. ಈ ಬೆಳವಣಿಗೆಗೆ ಕಾರಣ ನೀಡಿರುವ ಅಮೆರಿಕ ಸೇನೆ, ಇತ್ತೀಚೆಗೆ ಚಿನೂಕ್ ಹೆಲಿಕಾಪ್ಟರ್‌ಗಳಲ್ಲಿ ಸರಣಿ ಅಗ್ನಿ ದುರಂತ ಸಂಭವಿಸುತ್ತಿದೆ ಇದಕ್ಕಾಗಿ ಈ ಕ್ರಮ ಎಂದಿದೆ.
ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು,1960 ರಿಂದಲೂ ಅಮೆರಿಕ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿನೂಕ್ ಹೆಲಿಕಾಪ್ಟರ್ ಯುದ್ಧ ಭೂಮಿಯ ದೈತ್ಯ ಎಂದು ಹೆಸರು ಪಡೆದಿವೆ.

ಇತ್ತೀಚೆಗೆ ಇವುಗಳಲ್ಲಿ ಸರಣಿ ಅಗ್ನಿ ದುರಂತ ಸಂಭವಿಸುತ್ತಿರುವ ಕಾರಣ, ಅಮೆರಿಕ ಸೇನೆ ಈ ಚಿನೂಕ್ ಹೆಲಿಕಾಪ್ಟರ್ ಬಳಸದಂತೆ ಆದೇಶಿಸಿದೆ ಎಂದು ಹೇಳಿದೆ. ಇದರ ಬೆನ್ನಿಗೇ ಭಾರತೀಯ ಸೇನೆಗೂ ಈ ಬೆಳವಣಿಗೆ ಗೊಂದಲ ಉಂಟುಮಾಡಿದೆ. ಭಾರತ ಸುಮಾರು 15 ಚಿನೂಕ್ ಹೆಲಿಕಾಪ್ಟರ್ ಹೊಂದಿದ್ದು, ಇವುಗಳನ್ನು ಲಡಾಖ್, ಸಿಯಾಚಿನ್ ನಂತಹ ಸ್ಥಳಗಳಲ್ಲಿ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಸಹಾಯ ಮಾಡಲು, ಸೇನಾ ಸಲಕರಣೆಗಳನ್ನ, ಯೋಧರನ್ನು, ಅತ್ಯಂತ ಭಾರವಾದ ವಸ್ತುಗಳನ್ನ ಏರ್‌ಲಿಫ್ಟ್ ಮಾಡುವ ಕಾರ್ಯಾಚರಣೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಈ ನಡುವೆ ಅಮೆರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಗ್ನಿ ಅನಾಹುತಗಳು ಸಣ್ಣ ಪ್ರಮಾಣದ್ದಾಗಿವೆ. ಮತ್ತು ಈ ಘಟನೆಗಳು ಯಾವುದೇ ಗಾಯ, ಸಾವುಗಳಿಗೆ ಕಾರಣವಾಗಿಲಗಿಲ್ಲ. ಮುಂಜಾಗ್ರತಾ ಕ್ರಮವಾಗಿ ನಾವು ಚಿನೂಕ್ ಹೆಲಿಕಾಪ್ಟರ್ ಗಳ ಸೇವೆಯನ್ನ ಬಂದ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!