ಹೊಸಕೆರೆ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ಹೊಸದಿಗಂತ ವರದಿ,ಮೈಸೂರು:

ಹುಲಿ ದೇಹ ಗಾತ್ರದ ಚಿರತೆಯೊಂದು ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದು ಸೆರೆಯಾದ ಘಟನೆ ಮೈಸೂರು ತಾಲೂಕಿನ ಜಯಪುರ ಗ್ರಾಮದ ಹೊಸಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮ ಹಾಗೂ ಆಸುಪಾಸಿನಲ್ಲಿ ಓಡಾಡುತ್ತಿದ್ದ ಚಿರತೆ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಮತ್ತೆ ಪದೇ ಪದೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೋನನ್ನು ಇರಿಸಲಾಗಿತ್ತು. ಇದೀಗ ಸುಮಾರು ೭ ವರ್ಷ ವಯಸ್ಸಿನ ಗಂಡು ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ. ಬಳಿಕ ಅದನ್ನು ಗ್ರಾಮದಿಂದ ಸ್ಥಳಾಂತರಿಸಿ, ಅದಕ್ಕೆ ಮೈಕ್ರೋಚಿಫ್ ಅಳವಡಿಸಿದ ಬಳಿಕ ಕಾಡಿಗೆ ಬಿಡಲಾಯಿತು.

ಏಪ್ರಿಲ್ ೧ ರಿಂದ ಇಲ್ಲಿಯವರೆಗೆ ೧೭ ಚಿರತೆಗಳನ್ನು ಸೆರೆಹಿಡಿಯಲಾಗಿದ್ದು, ಅದರಲ್ಲಿ ೩ ಚಿರತೆಗಳನ್ನು ವೃದ್ಧಾಪ್ಯ, ಗಾಯಗಳು ಮತ್ತು ಆರೋಗ್ಯ ಸಮಸ್ಯೆಯಿಂದಾಗಿ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿದೆ ಎಂದು ಡಿಸಿಎಫ್ ಡಾ.ಬಸವರಾಜು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ಸುರೇಂದ್ರ ಭಾಗವಹಿಸಿದ್ದರು.

ಕರುವನ್ನು ಕೊಂದು ತಿಂದ ಚಿರತೆ
ಮತ್ತೊಂದೆಡೆ ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು ಗದ್ದೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಮೇಲೆ ಚಿರತೆ ದಾಳಿ ನಡೆಸಿ, ಕೊಂದು ತಿಂದಿರುವ ಘಟನೆ ಸರಗೂರು ಪಟ್ಟಣದ ಮೂಡಲಮಡದ ಹುಂಡಿಯಲ್ಲಿ ನಡೆದಿದೆ.

೧೨ನೇ ವಾರ್ಡ್ ಮೂಡಲಮಡದಹುಂಡಿ ಚಂದ್ರಶೇಖರ್ ಎಂಬುವರ ಕರುವು ಚಿರತೆ ದಾಳಿಗೆ ಬಲಿಯಾಗಿದೆ. ಮನೆಯ ಸಮೀಪದಲ್ಲೇ ಇದ್ದ ಗದ್ದೆಗೆ ಬಂದ ಚಿgಚಿve ಗದ್ದೆಯಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ದಾಳಿ ನಡೆಸಿ, ೧೦೦ ಮೀಟರ್ ಎಳೆದೊಯ್ದಿದು ಕತ್ತಿಬಾಗವನ್ನು ತಿಂದ ಪರಿಣಾಮ ಸ್ಥಳದಲ್ಲೇ ಕರುವು ಮೃತಪಟ್ಟಿದೆ, ಗದ್ದೆಯಲ್ಲಿ ಕೆಲಸ ಮುಗಿಸಿ ಕರುವಿಗೆ ನೀರು ಕುಡಿಸಲು ಬಂದಾಗ ಚಿರತೆ ದಾಳಿಗೆ ಕರು ಸಾವನ್ನಪ್ಪಿರುವುದು ಕಂಡು ಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!