ರಾಜ್ಯದ ಹಲವು ಭಾಗಗಳಲ್ಲಿ ಚಿರತೆ ಸೆರೆ, ತಿಪಟೂರು ಭಾಗದಲ್ಲಿ ಮತ್ತೊಂದು ಚಿರತೆ ಬೋನಿಗೆ

ಹೊಸದಿಗಂತ ವರದಿ ತಿಪಟೂರು:

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹುರುಳಿಹಳ್ಳಿ, ಮಣಕೀಕೆರೆ, ಹೊಸಳ್ಳಿ, ಚೌಲಿಹಳ್ಳಿ, ಮಿಸೇತಿಮ್ಮನಹಳ್ಳಿ ಭಾಗಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ದೂರು ಹಾಗೂ ಮನವಿಯ ಮೇಲೆ ಎಚ್ಚೆತ್ತುಕೊಂಡ ಅರಣ್ಯಇಲಾಖೆಯು ಹುರುಳಿಹಳ್ಳಿ ತೋಟದಲ್ಲಿ ಬೋನು ಇಡಲಾಗಿತ್ತು, ಬೋನು ಇಟ್ಟ ಒಂದೇ ದಿನದಲ್ಲಿ 6 ವರ್ಷದ ಹೆಣ್ಣು ಚಿರತೆ ಬೋನಿಗೆ ಸೆರೆಯಾಗಿದೆ.

ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸ್ವಲ್ಪ ಆತಂಕ ದೂರವಾಗಿದ್ದು ಇನ್ನು 3-4 ಚಿರತೆಗಳ ಓಡಾಟವಿದೆ ಇದೆ ರೀತಿ ಬೇರೆ ಬೇರೆ ಕಡೆ ಹೆಚ್ಚಿನ ಬೋನು ಇಟ್ಟರೆ ಅನುಕೂಲವಾಗಲಿದೆ ಎಂಬ ಗ್ರಾಮಸ್ಥರ ಮಾತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!