ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ನ ಜೀವ ಉಳಿಸಿದ್ದು ‘ಯಾರಿಗೂ ಬೇಡವಾಗಿದ್ದ ಸೀಟ್ 11A ಸೀಟ್ʼ
ಗುಜರಾತ್ನ ಅಹಮದಾಬಾದ್‌ನಿಂದ ಗ್ಯಾಟ್ವಿಕ್ ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು.
ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಈ ಪೈಕಿ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ರಮೇಶ್ ವಿಶ್ವಾಸ್ ಕುಮಾರ್ ಮಾತ್ರ ಬದುಕುಳಿದಿದ್ದು, ಅವರ ಪ್ರಾಣ ಉಳಿಯಲು ಸೀಟ್ ನಂಬರ್ 11A ಕಾರಣ ಎಂದು ಹೇಳಲಾಗಿದೆ.
ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ರಮೇಶ್ ಬ್ರಿಟಿಷ್ ಪ್ರಜೆಯಾಗಿದ್ದು, ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ತಮ್ಮ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಆದರೆ ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾರೆ.
ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ದೊಡ್ಡ ಸ್ಫೋಟ ಸಂಭವಿಸಿತು. ವಿಮಾನ ಗಾಳಿಯಲ್ಲಿ ಸುತ್ತಿ ನಂತರ ಅಪ್ಪಳಿಸಿತು. ನಾನು ಕಣ್ಣು ತೆರೆದಾಗ, ಸುತ್ತಲೂ ಶವಗಳು ಮತ್ತು ಅವಶೇಷಗಳು ಇದ್ದವು. ನಾನು ಭಯಭೀತನಾಗಿದ್ದೆ, ಆದರೆ ಹೇಗೋ ಸೀಟಿನಿಂದ ಎದ್ದು ಉರಿಯುತ್ತಿರುವ ಅವಶೇಷಗಳಿಂದ ಹೊರಗೆ ಓಡಿಹೋದೆ. ಈ ವೇಳೆ ಮುಖ ಮತ್ತು ಕಾಲುಗಳ ಮೇಲೆ ಗಂಭೀರ ಗಾಯಗಳಾಗಿದ್ದರೂ, ನಾನು ಕುಂಟುತ್ತಾ ಸ್ಥಳದಿಂದ ಹೊರಬಂದೆ ಎಂದರು.