ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಅಲಿಗಢದಲ್ಲಿ ಉದ್ಯಮಿಯೊಬ್ಬರ ಮೊಬೈಲ್ ಬ್ಲಾಸ್ಟ್ ಆಗಿದ್ದು, ಸುಟ್ಟ ಗಾಯಗಳಾಗಿವೆ.
ಉತ್ತಮ ಬ್ರ್ಯಾಂಡ್‌ನ ಮೊಬೈಲ್‌ನ್ನು ಉದ್ಯಮಿ ಪ್ರೇಮ್ ರಾಜ್ ಸಿಂಗ್ ಖರೀದಿಸಿದ್ದು, ಜೇಬಿನಲ್ಲಿ ಇಟ್ಟುಕೊಂಡಿದ್ದರು.
ಜೇಬು ಬಿಸಿಯಾದಂತೆ ಅನಿಸಿ ನೋಡಿದಾಗ ಜೇಬಿನಿಂದ ಹೊಗೆ ಕಾಣಿಸಿದೆ. ತಕ್ಷಣವೇ ಫೋನ್ ಹೊರತೆಗೆದಾಗ ಕೈಯಲ್ಲೇ ಬ್ಲಾಸ್ಟ್ ಆಗಿದ್ದು, ಮೊಬೈಲ್ ಎರಡು ಭಾಗವಾಗಿದೆ.
ತಕ್ಷಣವೇ ಪ್ರೇಮ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈ ಹಾಗೂ ಫೋನ್ ಇಟ್ಟುಕೊಂಡ ಕಾರಣದಿಂದ ತೊಡೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಖೇರಾ ಠಾಣೆಯಲ್ಲಿ ದೂರು ನೀಡಲಾಗಿದೆ.