March 23, 2026
Monday, March 23, 2026
spot_img

ಕರಾವಳಿ ಬಂದರಿಗೆ ಬಂತೊಂದು ವಿಲಾಸಿ ಹಡಗು: ಸಾಂಪ್ರದಾಯಿಕ ಸ್ವಾಗತಕ್ಕೆ ಮನಸೋತ ವಿದೇಶಿಗರು!

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರಿನ ನವಮಂಗಳೂರು ಬಂದರಿಗೆ ಗುರುವಾರ ವಿಲಾಸಿ ಹಡಗೊಂದು ಆಗಮಿಸಿದ್ದು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ದೂರದ ಮೊರ್ಮುಗಾವೊದಿಂದ ಬಂದ ಈ ಪ್ರವಾಸಿಗರನ್ನು ನವಮಂಗಳೂರು ಬಂದರಿನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಬರಮಾಡಿಕೊಂಡ ಬಗೆಗೆ ವಿದೇಶಿಗರು ಮನಸೋತರು. ಭಾರತೀಯ ಸಾಂಪ್ರದಾಯಿಕ ಶೈಲಿಯ ಮತ್ತು ಆತ್ಮೀಯವಾದ ಸ್ವಾಗತಕ್ಕೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.


ಎಷ್ಟು ಮಂದಿ ಬಂದಿದ್ದರು?
ನವಮಂಗಳೂರಿಗೆ ಬಂದ ಪ್ರಸಕ್ತ ಋತುಮಾನದ ಎರಡನೇ ವಿಲಾಸಿ ಹಡಗು ಇದಾಗಿದೆ. ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಹೆಸರಿನ ಈ ಹಡಗಿನಲ್ಲಿ 95 ಪ್ರಯಾಣಿಕರು ಮತ್ತು 70 ಸಿಬ್ಬಂದಿ ಇದ್ದರು. ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಬಂದರು ಪ್ರದೇಶದಲ್ಲಿ ಮಾಡಲಾಗಿತ್ತು.

ಸೆಲಿ ಕ್ಲಿಕ್ಕಿಸಿ ಖುಷಿ ಪಟ್ಟರು:
ಬಂದ ವಿದೇಶಿ ಪ್ರವಾಸಿಗರಿಗೆಂದ ವಿಶೇಷ ರೀತಿಯಲ್ಲಿ ಸೆಲಿ ಸ್ಟ್ಯಾಂಡ್ ಮಾಡಲಾಗಿದ್ದು, ಇಲ್ಲಿ ಸೆಲಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿಪಟ್ಟರು. ಆಯುಷ್ ಸಚಿವಾಲಯ ಸ್ಥಾಪಿಸಿದ ಧ್ಯಾನ ಕೇಂದ್ರ, ಪ್ರವಾಸೋದ್ಯಮ ಸಚಿವಾಲಯ ಸ್ಥಾಪಿಸಿದ ಯಕ್ಷಗಾನ ಕಲಾ ಪ್ರಕಾರದ ಸೆಲಿ ವಿದೇಶಿಗರ ಗಮನಸೆಳೆಯಿತು.

ನಗರ ಸುತ್ತಾಟ:
ನವಮಂಗಳೂರಿಗೆ ಬಂದ ಬಳಿಕ ನಗರದ ಹಲವೆಡೆ ಅವರು ಸುತ್ತಾಟ ನಡೆಸಿದರು. ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆಗಳು ಮತ್ತು ಕಲ್ಬಾವಿ ಗೋಡಂಬಿ ಕಾರ್ಖಾನೆ ಸೇರಿದಂತೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !