ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ ದೇಶಕ್ಕೆ 3800 TDW ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆಯ ವಿಲ್ಸನ್ ಎಎಸ್ ಕಂಪನಿಯ ಸಿಬ್ಬಂದಿ ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್ಗೆ ಬಂದು ಖರೀದಿ ಪ್ರಕ್ರಿಯೆಯನ್ನು ಪೂರೈಸಿದರು. ಒಪ್ಪಂದಕ್ಕೆ ಸಹಿ ಹಾಕುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ ತೆಂಗಿನಕಾಯಿ ಒಡೆದು, ಮಾಲೆ ಹಾಕಿ, ಆರತಿ ಎತ್ತಿ ಪೂಜೆ ಮಾಡಲಾಯಿತು.
02_89.43 ಉದ್ದ, 13.2 ಮೀಟರ್ ಅಗಲದ ಹಡಗು 4.2 ಮೀಟರ್ ಡ್ರಾಫ್ಟ್ ಹೊಂದಿದೆ. ಸರಕು ಸಾಗಾಣಿಕೆ ಮಾಡುವ ಪರಿಸರ ಸ್ನೇಹಿ ಹಡಗು ಇದಾಗಿದೆ. ಮೊದಲ ಬಾರಿಗೆ ಉಡುಪಿಯಿಂದ ನಾರ್ವೆಗೆ ಹಡಗು ಪೂರೈಸಲಾಗುತ್ತಿದೆ. ಈ ಹಡಗನ್ನು ವಿಭಿನ್ನ ಶೈಲಿಯಲ್ಲಿ ತಯಾರಿಸಲಾಗಿದೆ.
ಆತ್ಮ ನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಈ ಬೃಹತ್ ನೌಕೆ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1000ಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಉದ್ಯೋಗ ಪಡೆದಿದ್ದಾರೆ.