VIRAL VIDEO | ನೋಡುಗರ ಕಣ್ಣರಳಿಸುವಂತಿತ್ತು ಬೆಕ್ಕಿನೊಂದಿಗಿನ ಬೈಕ್‌ ಸವಾರನ ಬೈಕ್‌ ರೈಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಈಗೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವೀಡಿಯೋಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಈ ಪೈಕಿ ಬೈಕ್‌ ಸವಾರನೊಬ್ಬ ತನ್ನೆರಡು ಬೆಕ್ಕುಗಳೊಂದಿಗೆ ಸಂಚರಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ.

ನಾವು ನೀವೆಲ್ಲಾ ಶ್ವಾನದೊಂದಿಗೆ ಬೈಕ್‌ನಲ್ಲಿ ಸಂಚರಿಸುವ ಸವಾರರನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್‌ ನಲ್ಲಿ ಸಂಚರಿಸುವಾಗ ತನ್ನ ಬೆನ್ನಿನ ಮೇಲೆ ಒಂದು ಬೆಕ್ಕನ್ನು ಕೂರಿಸಿಕೊಂಡಿದ್ದಾನೆ, ಮತ್ತೊಂದನ್ನು ತನ್ನ ಬೈಕಿನ ಟ್ಯಾಂಕ್‌ ನ ಮೇಲೆ ಕೂರಿಸಿಕೊಂಡಿದ್ದಾನೆ.

ಆ ಬೆಕ್ಕುಗಳು ಯಾವುದೇ ಭಯವಿಲ್ಲದಂತೆ ಕುಳಿತಿರುವುದು ನೋಡುಗರ ಕಣ್ಣರಳಿಸುವಂತೆ ಮಾಡಿದೆ. ನೀವೂ ಒಮ್ಮೆ ಆ ವೀಡಿಯೋ ಅನ್ನು ಇಲ್ಲಿ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!