ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಬೆಳಗಾವಿಗೆ ಆಗಮಿಸುತ್ತಿರುವ ವೇಳೆ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಪ್ರಯಾಗ್ರಾಜ್ ಯಾತ್ರೆಗೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ಮೂಲದ ದೇಶಪಾಂಡೆ ಗಲ್ಲಿಗೆ ನಿವಾಸಿ ರವಿ ಜಟಾರ (61) ಇದೀಗ ಸಾವನ್ನಪ್ಪಿದ್ದಾರೆ.
ಪ್ರಯಾಗ್ ರಾಜ್ ದಿಂದ ಬೆಳಗಾವಿಗೆ ವಾಪಸ್ ಆಗುವಾಗ ಪುಣೆಯಲ್ಲಿ ರೈಲಿನಲ್ಲಿ ಅವರಿಗೆ ಹೃದಯಘಾತವಾಗಿ ರವಿ ಜಠಾರ ಸಾವನಪ್ಪಿದ್ದಾರೆ.