ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲಪಾಡು ಎಂಬಲ್ಲಿ ಮದುವೆಗೆ ಒಪ್ಪದ ಗೆಳತಿಯ ಕತ್ತು ಕೊಯ್ದಿದ್ದಾನೆ ಪಾಗಲ್ ಪ್ರೇಮಿ. ಗೆಳತಿ ವಿರುದ್ಧ ದ್ವೇಷ ಸಾಧಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಗುಂಟೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾಳೆ. ವಿಷಯ ತಿಳಿದ ಬಳಿಕ ಆತ ಕೂಡ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ಪ್ರಕಾರ, ವಿಜಯವಾಡದ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷ ಓದುತ್ತಿರುವ ತಪಸ್ವಿ ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಬಿಟೆಕ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಞಾನೇಶ್ವರ್ ಎಂಬಾತನನ್ನು ಭೇಟಿಯಾಗಿದ್ದಳು. ಆ ಪರಿಚಯ ಸ್ವಲ್ಪ ಪ್ರೀತಿಗೆ ತಿರುಗಿತ್ತು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರ ಪ್ರೀತಿಯಲ್ಲಿ ಸ್ವಲ್ಪ ಬಿರುಕುಂಟಾಗಿದೆ. ಗೊಂದಲ ನಿವಾರಿಸಲು ಮಾತುಕತೆಗೆ ಬರುವಂತೆ ಮನೆಗೆ ಕರೆಸಿಕೊಂಡ ಪಾಗಲ್ ಪ್ರೇಮಿ ಜ್ಞಾನೇಶ್ವರ್ ಜೇಬಿನಿಂದ ಸರ್ಜಿಕಲ್ ಬ್ಲೇಡ್ ತೆಗೆದು ಗೆಳತಿ ತೇಜಸ್ವಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲೇ ಇದ್ದ ಆಕೆಯ ಸ್ನೇಹಿತೆ ಕಿರುಚುತ್ತಾ ಮೇಲಿನ ಮಹಡಿಯಿಂದ ಕೆಳಗೆ ಬಂದು ಮನೆಯ ಯಜಮಾನನನ್ನು ಮೇಲಕ್ಕೆ ಕರೆದುಕೊಂಡು ಹೋಗುವ ಮುನ್ನವೇ ಕೊಠಡಿಯ ಬಾಗಿಲು ಮುಚ್ಚಿ ತಪಸ್ವಿ ಮೇಲೆ ಜ್ಞಾನೇಶ್ವರ್ ಅತ್ಯಂತ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಎಷ್ಟು ಕೂಗಿದರೂ ಜ್ಞಾನೇಶ್ವರ್ ಬಾಗಿಲು ತೆರೆಯದ ಕಾರಣ ಗ್ರಾಮಸ್ಥರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ರಕ್ತದ ಮಡುವಿನಲ್ಲಿ ಏದುಸಿರು ಬಿಡುತ್ತಿದ್ದ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಪಸ್ವಿ ಬೇರೆ ಯುವಕನೊಂದಿಗೆ ಮದುವೆಯಾಗುವುದಾಗಿ ಹೇಳಿದ್ದಕ್ಕೆ ಜ್ಞಾನೇಶ್ವರ್ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಕೂಡಲೇ ಆರೋಪಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.