ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ತೀವ್ರತೆ: ಕುಡಿಯಲು ನೀರಿಲ್ಲ, ಎಲ್ಲಿಯೂ ಕರೆಂಟಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ದೇಶದ ಹಲವು ಭಾಗಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ಇಂಧನ ಮೂಲಸೌಕರ್ಯಗಳು ಹಾನಿಗೊಳಗಾಗಿದೆ. ಹಲವು ಭಾಗಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ವ್ಯತ್ಯಯ ಎದುರಾಗಿದೆ.

ಒಡೆಸ್ಸಾ, ಜೆಕಾರ್ಸಿ, ಕ್ರಿವಿ ಹಾಗೂ ರಿಹ್ ಸೇರಿ ಹಲವೆಡೆ ಸ್ಫೋಟ ಸಂಭವಿಸಿದೆ. ಒಡೆಸ್ಸಾದಲ್ಲಿ ನೀರು ಸರಬರಾಜು ಪಂಪಿಂಗ್ ಸ್ಟೇಷನ್ ಕ್ಷಿಪಣಿ ದಾಳಿಯಿಂದ ಧ್ವಂಸವಾಗಿದೆ. ಇದರಿಂದಾಗಿ ಇಡೀ ನಗರಕ್ಕೆ ಕುಡಿಯಲು ನೀರು ಇಲ್ಲದಂತಾಗಿದೆ. ವಾಯುದಾಳಿಯ ಎಚ್ಚರಿಕೆ ಗಂಟೆಗಳು ಮೊಳಗಿದ್ದರಿಂದ ನಾಗರಿಕರು ಸುರಕ್ಷಿತ ನೆಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಶತ್ರುಗಳು ಹೊಸತಾಗಿ ಉಕ್ರೇನ್ ಮೇಲೆ ಹೊಸತಾಗಿ ಕ್ಷಿಪಣಿ ದಾಳಿ ಮೂಲಕ ಆಕ್ರಮಣಕ್ಕೆ ಇಳಿದಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಉಪಮುಖ್ಯಸ್ಥ ಕಿರಿಲೊ ಟಿಮೊಶೆಂಕೊ ಹೇಳಿದ್ದಾರೆ. ದಾಳಿಯಿಂದಾಗಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!