ನಮ್ಮ ಮೆಟ್ರೋದಲ್ಲಿ ಮಹಿಳೆಯ ಖಾಸಗಿ ಅಂಗದ ಫೋಟೊ ತೆಗೆದ ಕಾಮುಕ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಮೆಟ್ರೋದಲ್ಲಿ ಮಹಿಳೆಯರ ಖಾಸಗಿ ಅಂಗಗಳ ಫೋಟೊ ಹಾಗೂ ವಿಡಿಯೋ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ನಮ್ಮ ಮೆಟ್ರೋದಲ್ಲಿ ಮಹೇಶ್​ ಎಂಬ ಕಾಮುಕ ಯುವತಿಯರ ಖಾಸಗಿ ಅಂಗಗಳ ಫೋಟೋ ತೆಗೆದು ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಹಲವು ಯುವತಿಯರ ಖಾಸಗಿ ಅಂಗಗಳ ಫೋಟೋ ಮತ್ತು ವಿಡಿಯೋ ಶೂಟ್​ ಮಾಡಿದ್ದಾನೆ.

ಒಂದು ವಾರದ ಹಿಂದೆ ಡಿಸೆಂಬರ್​ 25ನೇ ತಾರೀಕು ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಮೆಜೆಸ್ಟಿಕ್​​ನಿಂದ ಜೆ.ಪಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಹೇಶ್​ ಎಂಬ ಕಾಮುಕ ಯುವತಿ ಫೋಟೋ, ವಿಡಿಯೋ ತೆಗೆದಿದ್ದಾನೆ. ವಿಷಯ ತಿಳಿದು ಸಿಟ್ಟಿಗೆದ್ದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಇದೇ ವೇಳೆ ಡ್ಯೂಟಿ ಮುಗಿಸಿ ಮನೆ ಕಡೆ ಹೊರಟಿದ್ದ ಮೆಟ್ರೋ ಸಿಬ್ಬಂದಿ ಯುವತಿ ನೆರವಿಗೆ ಧಾವಿಸಿದ್ದಾರೆ.

ಸದ್ಯ ಕಾಮುಕ ಮಹೇಶ್​​ನನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಆರೋಪಿ ಮೊಬೈಲ್​ ಪರಿಶೀಲಿಸಿದಾಗ ಸಾಕಷ್ಟು ವಿಡಿಯೋಗಳು ಸಿಕ್ಕಿವೆ. ಆರೋಪಿಯನ್ನು ಬಂಧಿಸಿದ್ದಲ್ಲದೇ ನಮ್ಮ ಮೆಟ್ರೋ 5 ಸಾವಿರ ದಂಡ ವಿಧಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!