ಹೊಸದಿಗಂತ ವರದಿ ತುಮಕೂರು :
ತಾಲೂಕಿನ ಮಲ್ಲಸಂದ್ರ ಬಳಿ ಸೋಮವಾರ ಬೆಳಗಿನ ಜಾವ ಕಬ್ಬಿಣದ ರಾಡ್ ನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ಬಿಹಾರ ಮೂಲದ ಮಧು ಪಾಸ್ವಾನ್ (35) ಕೊಲೆಯಾದ ವ್ಯಕ್ತಿ. ಮಲ್ಲಸಂದ್ರ ಬಳಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಬಿಹಾರದ ಮೂಲದ ಸ್ನೇಹಿತನೊಂದಿಗೆ ಗಲಾಟೆ ಮಾಡಿಕೊಂಡಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.