ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಮತದಾನ ಮುಗಿಸಿ ಮನೆಗೆ ವಾಪಾಸಾದ ವೇಳೆ ವ್ಯಕ್ತಿಯೊಬ್ಬರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತುಮಕೂರು ನಗರದ ಎಸ್.ಎಸ್. ಪುರಂನ 54 ವರ್ಷದ ರಮೇಶ್ ಮೃತರು. ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದ ರಮೇಶ್ ಎಸ್ವಿಕೆ ಸ್ಕೂಲ್ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಮತ ಚಲಾಯಿಸಿ ಮನೆಗೆ ಬಂದಿದ್ದರು.